ಪುತ್ತೂರು : ಪ್ರಧಾನಮಂತ್ರಿ ಕೌಶಲ್ಯ ಯೋಜನೆಯಡಿ ಉಚಿತ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

ಪುತ್ತೂರು: ನಗರಸಭೆಯ ವತಿಯಿಂದ ಆರೋಗ್ಯ
ಇಲಾಖೆಯಲ್ಲಿನ ಕೋವಿಡ್ ವಾರಿಯರ್ ಕ್ಯಾಶ್ ಕೋರ್ಸನ್ನು ಪ್ರಧಾನಮಂತ್ರಿ ಕೌಶಲ್ಯ ಯೋಜನೆಯಡಿ ಉಚಿತ ಕೌಶಲ್ಯ ತರಬೇತಿ ಯೋಜನೆಯಡಿಯಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಶಿಷ್ಯ ವೇತನದೊಂದಿಗೆ ನೀಡಲಾಗುವುದು ಎಂದು ಪುತ್ತೂರು ನಗರಸಭೆ ಪ್ರಕಟಣೆ ತಿಳಿಸಿದೆ.

ಅಸಕ್ತ ಅಭ್ಯರ್ಥಿಗಳು ತಮ್ಮ ವಿದ್ಯಾಹರ್ತೆಯ ಹಾಗೂ ಆಧಾರ್ ಕಾರ್ಡ್, ಭಾವ ಚಿತ್ರ, ಬ್ಯಾಂಕ್ ಖಾತೆ ವಿವರಗಳೊಂದಿಗೆ ಪುತ್ತೂರು ನಗರಸಭೆಯಲ್ಲಿ ನೋಂದಾಯಿಸಬೇಕು.

ಅಭ್ಯರ್ಥಿಯ ತರಬೇತಿಯ ಸಂಪೂರ್ಣ ಖರ್ಚನ್ನು ಸರಕಾರವು ಭರಿಸುತ್ತದೆ. ಹಾಗೂ ತರಬೇತಿ ಅವಧಿಯಲ್ಲಿ 1 ತಿಂಗಳು ಥಿಯರಿ ಮತ್ತು 3 ತಿಂಗಳು ಜಾಬ್ ಟ್ರೈನಿಂಗ್ ಶಿಷ್ಯವೇತನದೊಂದಿಗೆ ಜರುಗಲಿದೆ. ಆಸಕ್ತರು ವಿವರಗಳಿಗಾಗಿ ನಗರಸಭೆಯನ್ನು ಸಂಪರ್ಕಿಸುವಂತೆ ಪೌರಾಯುಕ್ತ ಮಧು ಎಸ್ ಮನೋಹರ್ ತಿಳಿಸಿದ್ದಾರೆ.

Leave A Reply

Your email address will not be published.