Home latest ‘ಕರ್ಮ ಪೂಜಾ’ದ ಬಳಿಕ ನಡೆವ ವಿಸರ್ಜನಾ ಕಾರ್ಯಕ್ರಮದ ವೇಳೆ ಏಳು ಬಾಲಕಿಯರು ಹೊಂಡದಲ್ಲಿ ಮುಳುಗಿ ಸಾವು!!

‘ಕರ್ಮ ಪೂಜಾ’ದ ಬಳಿಕ ನಡೆವ ವಿಸರ್ಜನಾ ಕಾರ್ಯಕ್ರಮದ ವೇಳೆ ಏಳು ಬಾಲಕಿಯರು ಹೊಂಡದಲ್ಲಿ ಮುಳುಗಿ ಸಾವು!!

Hindu neighbor gifts plot of land

Hindu neighbour gifts land to Muslim journalist

ಜಾರ್ಖಂಡ್ :ಹಬ್ಬದ ಪೂಜೆಯಂದು ‘ಕರ್ಮ ಪೂಜಾ’ ವಿಧಿವಿಧಾನಗಳನ್ನು ನೆರವೇರಿಸಿದ ನಂತರ,ವಿಸರ್ಜನೆ ಕಾರ್ಯಕ್ರಮಕ್ಕಾಗಿ ತೆರಳಿದ್ದ ವೇಳೆ ಏಳು ಬಾಲಕಿಯರು ಹೊಂಡದಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ
ಲಾತೇಹಾರ್ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ.

ಜಿಲ್ಲೆಯ ಬಾಲೂಮಠ ಪೊಲೀಸ್ ಠಾಣೆ
ವ್ಯಾಪ್ತಿಯ ಬುಕ್ರು ಗ್ರಾಮದಲ್ಲಿ ಈ ಘಟನೆ ನಡೆದಿದೆ
ಎಂದು ಜಿಲ್ಲಾಧಿಕಾರಿ ಅಬು ಇಮ್ರಾನ್ ತಿಳಿಸಿದ್ದಾರೆ.

‘ಕರ್ಮ ಪೂಜಾ’ ಎಂಬುದು ಜಾರ್ಖಂಡ್‌ನಲ್ಲಿ
ಆಚರಿಸಲಾಗುವ ದೊಡ್ಡ ಹಬ್ಬಗಳಲ್ಲೊಂದಾಗಿದ್ದು, ಇದು ಪ್ರಕೃತಿಯನ್ನು ಪೂಜಿಸುವ ಹಬ್ಬವಾಗಿದೆ.

ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ತೆರಳಿದ್ದು,
ಹಲವರನ್ನು ರಕ್ಷಿಸಲಾಗಿದೆ. ಈ ಘಟನೆಯಲ್ಲಿ
ಹಲವರು ಗಾಯಗೊಂಡಿದ್ದು, ಮೂವರನ್ನು
ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.