ಕಡಬ | ತೂಗುಸೇತುವೆಯಿಂದ ಜಿಗಿದು ಅಪರಿಚಿತ ಆತ್ಮಹತ್ಯೆ ಶಂಕೆ

Share the Article

ಕಡಬ ತಾಲೂಕಿನ ಉದನೆಯ ತೂಗುಸೇತುವೆಯಿಂದ ನದಿಗೆ ಯಾರೋ ಗಂಡಸು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಗೊಂಡಿದೆ.

ತೂಗು ಸೇತುವೆಯಲ್ಲಿ ಪುರುಷರ 1 ಜೊತೆ ಚಪ್ಪಲ್ ಹಾಗೂ ಬ್ಯಾಗ್ ಪತ್ತೆಯಾಗಿದ್ದು,ಇದು ಅನುಮಾನಕ್ಕೆ ಕಾರಣವಾಗಿದೆ.

ಮುಂಜಾನೆ ಸ್ಥಳೀಯರು ಗಮನಿಸಿ ಪೊಲೀಸರಿಗೆ
ಮಾಹಿತಿ ನೀಡಿದ್ದು ನೆಲ್ಯಾಡಿ ಹೊರಠಾಣೆ ಪೊಲೀಸರು
ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಬ್ಯಾಗ್ ನಲ್ಲಿ ಗುರುತು ಚೀಟಿ ಪತ್ತೆಯಾಗಿದ್ದು ಪುಟ್ಟಪರ್ತಿ
ನಿವಾಸಿ ಎಂದು ಹೇಳಲಾಗಿದೆ. ಅಲ್ಲದೇ ಡೆತ್ ನೋಟ್ ಹಾಗೂ ಧರ್ಮಸ್ಥಳದಿಂದ ಉದನೆಗೆ ಮಾಡಲಾಗಿದ್ದ ಬಸ್ ಟಿಕೆಟ್ ಸಹ ಬ್ಯಾಗ್ ನಲ್ಲಿ ಪತ್ತೆಯಾಗಿದೆ. ಹೆಚ್ಚಿನ
ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Leave A Reply