Home latest ಪ್ರಿಯತಮನ ಸಾವಿನಿಂದ ಮನನೊಂದು ಪ್ರೇಯಸಿ ಆತ್ಮಹತ್ಯೆ| ಸಾವಿನಲ್ಲೂ ಜೊತೆಯಾದ ಅಮರ ಪ್ರೇಮಿಗಳು!!

ಪ್ರಿಯತಮನ ಸಾವಿನಿಂದ ಮನನೊಂದು ಪ್ರೇಯಸಿ ಆತ್ಮಹತ್ಯೆ| ಸಾವಿನಲ್ಲೂ ಜೊತೆಯಾದ ಅಮರ ಪ್ರೇಮಿಗಳು!!

Hindu neighbor gifts plot of land

Hindu neighbour gifts land to Muslim journalist

ಚಾಮರಾಜನಗರ: ಪ್ರೀತಿ ಕುರುಡು ಎಂಬ ಮಾತಿದೆ. ಆದರೆ ನಿಜವಾದ ಪ್ರೀತಿ ಯಾವತ್ತೂ ನಿಷ್ಕಲ್ಮಶವಾಗಿರುತ್ತದೆ. ಅದರಂತೆ ಪ್ರೀತಿ ಎಷ್ಟು ಪವಿತ್ರವಾದದ್ದು ಎಂದು ಈ ಇಬ್ಬರು ಜೋಡಿಗಳ ಬಂಧನ ತಿಳಿಸಿ ಕೊಡುತ್ತದೆ.

ಹೌದು, ಇವರಿಬ್ಬರ ಪ್ರೇಮ ಅಮರವಾಗಿದ್ದು, ಸಾವಲ್ಲೂ ಜೊತೆಯಾಗಿ ನಡೆದ ಅಮರ ಕಥನವಿದು. ಪ್ರಿಯಕರ ಅಪಘಾತದಲ್ಲಿ ಮೃತಪಟ್ಟ ಎಂಬ ವಿಚಾರ ತಿಳಿದು ಪ್ರೇಯಸಿ ನೇಣಿಗೆ ಕೊರಳೊಡ್ಡಿ ಮೃತಪಟ್ಟ ಘಟನೆ ಚಾಮರಾಜನಗರ ತಾಲೂಕಿನ ಬಂಡಿಗೆರೆ ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ ತಾಲೂಕಿನ ಬಂಡಿಗೆರೆ ಗ್ರಾಮದ ಪೂಜಾ(19)ಆತ್ಮಹತ್ಯೆ ಮಾಡಿಕೊಂಡಾಕೆ.

ಚಾಮರಾಜನಗರ ತಾಲೂಕಿನ ಚಂದುಕಟ್ಟೆಮೋಳೆ ಗ್ರಾಮದ ಮಹೇಶ್(23) ಹಾಗೂ ಪೂಜಾ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಬುಧವಾರ ರಾತ್ರಿ ಅಪಘಾತದಲ್ಲಿ ಮಹೇಶ್ ಮೃತಪಟ್ಟಿದ್ದು,ಈ ವಿಚಾರ ತಿಳಿದು ಮನನೊಂದಿದ್ದ ಪ್ರೇಯಸಿ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.

ಸಾವಲ್ಲೂ ಜೊತೆಯಾಗಿ ನಡೆದ ಇವರಿಬ್ಬರ ಪ್ರೀತಿಗೆ ಯಮನೇ ಮೌನಿಯಾಗಿರಬಹುದೊ ಏನು.ಯುವತಿಯ ಆತ್ಮಹತ್ಯೆಯ ಮಾಹಿತಿ ತಿಳಿದ ಬಳಿಕ ಇವರ ಸ್ನೇಹಿತರ ಗುಂಪು ಮರುಗುತ್ತಿದ್ದಾರೆ. ಅಲ್ಲದೆ ಇವರಿಬ್ಬರನ್ನು ಸಾಮಾಜಿಕ ಜಾಲತಾಣಗಳಲ್ಲಿ “ರೋಮಿಯೋ-ಜೂಲಿಯೆಟ್”ಗೆ ಹೋಲಿಸಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಈ ಘಟನೆಯ ಸಂಬಂಧ ಯಾವುದೇ ದೂರು, ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.