ನಿವೃತ್ತ ಎಎಸ್‌ಐ ಸಾಂತಪ್ಪಗೌಡ ನಿಧನ

Share the Article

ಪುತ್ತೂರು: ಮುಂಡೂರು ಗ್ರಾಮದ ಭಕ್ತಕೋಡಿ ಕಡ್ಯ ನಿವಾಸಿ, ನಿವೃತ್ತ ಎಎಸ್‌ಐ ಸಾಂತಪ್ಪ ಗೌಡ(72ವ) ಅವರು ಅಲ್ಪಕಾಲದ ಅಸೌಖ್ಯದಿಂದ ಸೆ.17ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.

ಸುಳ್ಯ, ಸುಬ್ರಹ್ಮಣ್ಯ, ಮಂಗಳೂರು ಸೇರಿದಂತೆ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಸಾಂತಪ್ಪ ಗೌಡ ಅವರು ಬಿ.ಸಿ.ರೋಡ್ ಠಾಣೆಯಲ್ಲಿ ಎಎಸ್‌ಐ ಆಗಿದ್ದ ವೇಳೆ ನಿವೃತ್ತರಾಗಿದ್ದರು.

ನಿವೃತ್ತಿಯ ಬಳಿಕ ಪುತ್ತೂರು ಮುಕ್ರಂಪಾಡಿಯಲ್ಲಿ ವಾಸವಾಗಿದ್ದರು.

ಮೃತರು ಪುತ್ರರಾದ ಆಶಿತ್, ಹರ್ಷಿತ್, ಪುತ್ರಿ ಚೈತ್ರಾ ಅವರನ್ನು ಅಗಲಿದ್ದಾರೆ.

Leave A Reply