Home News ಬಸ್ಸಿನಲ್ಲಿ ರಿಯಲ್ ಆಗಿ ನಡೆದೇ ಹೋಯಿತು ‘ಗೀತ ಗೋವಿಂದಂ’ ಸಿನಿಮಾದ ಸೀನ್ | ಪ್ರಯಾಣದ ವೇಳೆ...

ಬಸ್ಸಿನಲ್ಲಿ ರಿಯಲ್ ಆಗಿ ನಡೆದೇ ಹೋಯಿತು ‘ಗೀತ ಗೋವಿಂದಂ’ ಸಿನಿಮಾದ ಸೀನ್ | ಪ್ರಯಾಣದ ವೇಳೆ ನಿದ್ದೆ ಮಾಡುತ್ತಿದ್ದ ಯುವತಿಗೆ ಕಿಸ್ ಕೊಟ್ಟ ಅಪರಿಚಿತ ಯುವಕ !!

Hindu neighbor gifts plot of land

Hindu neighbour gifts land to Muslim journalist

ಈಗಿನ ಯುವಕರಂತೂ ಸಿನಿಮಾ ನೋಡಿ ತಾವು ಕೂಡ ಯಾವ ಹೀರೋಗೂ ಕಡಿಮೆ ಇಲ್ಲ ಎಂಬಂತೆ ಮಾಡುತ್ತಾರೆ. ಹಾಗೆಯೇ ಇಲ್ಲೊಬ್ಬ ತೆಲುಗು ನಟ ವಿಜಯ್ ದೇವರಕೊಂಡನ್ನು ಅನುಕರಣೆ ಮಾಡಿ, ಇದೀಗ ಪೊಲೀಸರ ಅತಿಥಿಯಾಗಲು ರೆಡಿಯಾಗಿದ್ದಾನೆ.

ಹೌದು, ತೆಲುಗು ಚಿತ್ರ ಗೀತಾ ಗೋವಿಂದಂ ಸಿನಿಮಾ ಶೈಲಿಯಲ್ಲೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳಿಗೆ ಯುವಕನೊಬ್ಬ ಚುಂಬಿಸಿ ಪರಾರಿಯಾಗಿರುವ ವಿಚಿತ್ರ ಘಟನೆ ಬಾಗಲಗುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಳ್ಳಾರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಸ್ಲೀಪರ್‌ ಎಸಿ ಬಸ್‌ನಲ್ಲಿ ಸೆ.13ರಂದು ಮುಂಜಾನೆ ಐದು ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಚಲಿಸುತ್ತಿದ್ದ ಬಸ್ಸಿನಲ್ಲಿ ನಿದ್ರೆಗೆ ಜಾರಿದ ಯುವತಿಯ ಕೆನ್ನೆಗೆ ಚುಂಬಿಸಿರುವ ಬಗ್ಗೆ ಯುವತಿಯೇ ಪೀಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೀಣ್ಯ ಠಾಣೆ ಪೊಲೀಸರು ಬಾಗಲಗುಂಟೆ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದರಿಂದ ಪ್ರಕರಣವನ್ನು ಬಾಗಲಗುಂಟೆ ಪೊಲೀಸ್‌ ಠಾಣೆಗೆ ವರ್ಗಾಯಿಸಿದ್ದಾರೆ.

ಏನಿದು ಘಟನೆ?

ಬೆಂಗಳೂರು ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ಯುವತಿಯೊಬ್ಬಳು ಗೌರಿ ಗಣೇಶ ಹಬ್ಬ ಮುಗಿಸಿ ತಮ್ಮೂರಾದ ಬಳ್ಳಾರಿಯಿಂದ ಬೆಂಗಳೂರಿಗೆ ಸೆ.13ರಂದು ಬಸ್‌ನಲ್ಲಿ ಹೊರಟಿದ್ದರು. ಬೆಳಗಿನ ಜಾವ ಐದು ಗಂಟೆ ಸಮಯದಲ್ಲಿ ಬಸ್‌ ಟಿ. ದಾಸರಹಳ್ಳಿ- ಜಾಲಹಳ್ಳಿ ಕ್ರಾಸ್‌ ಮಧ್ಯೆ ಸಂಚರಿಸುವಾಗ ಯುವಕ ಯುವತಿಗೆ ಚುಂಬಿಸಿದ ಘಟನೆ ನಡೆದಿದೆ. ಯುವಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆ ಯುವಕ ಯಾರು? ಎಲ್ಲಿಂದ ಪ್ರಯಾಣಿಸಿದ್ದಾನೆ? ಆನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿಸಿದ್ದನೇ ಮುಂತಾದ ಆತನ ಬಗೆಗಿನ ವಿವರ ನೀಡುವಂತೆ ಕೆಎಸ್‌ಆರ್‌ಟಿಸಿಗೆ ಪೊಲೀಸರು ಮಾಹಿತಿ ಕೇಳಿದ್ದಾರೆ.

ಇನ್ನೊಂದು ಮಾಹಿತಿಯ ಪ್ರಕಾರ, ಯುವತಿಯ ಪಕ್ಕದ ಸೀಟ್‌ನಲ್ಲಿ ಕುಳಿತಿದ್ದ ಯುವಕ, ಆಕೆ ಬಸ್‌ಗೆ ಹತ್ತಿದಾಗಿನಿಂದ ಆಕೆಯನ್ನೇ ದುರುಗುಟ್ಟಿ ನೋಡುತ್ತಿದ್ದ ಎನ್ನಲಾಗಿದೆ. ಆ ಕಾಮುಕ ಯುವಕನ ನೋಟಕ್ಕೆ ಕ್ಯಾರೇ ಅನ್ನದ ಯುವತಿ ತನ್ನ ಪಾಡಿಗೆ ತಾನು ಬಸ್‌ನಲ್ಲಿ ಕುಳಿತಿದ್ದಳು. ಬಸ್‌ನಲ್ಲಿ ಜನರೂ ಇದ್ದಿದ್ದರಿಂದ ಧೈರ್ಯವಾಗಿ ಪ್ರಯಾಣ ಮುಂದುವರಿಸಿದ್ದರು. ಆದರೆ ಬಳ್ಳಾರಿಯಿಂದ ಹೊರಟ ಬಸ್ ಬೆಳಗಿನ ಜಾವ ಐದು ಗಂಟೆ ಸಮಯದಲ್ಲಿ ಬಸ್‌ ಟಿ. ದಾಸರಹಳ್ಳಿ- ಜಾಲಹಳ್ಳಿ ಕ್ರಾಸ್‌ ಮಧ್ಯೆ ಸಂಚರಿಸುವಾಗ ಕಾಮುಕ ಯುವಕ ಆಕೆಗೆ ಕಿಸ್ ಕೊಟ್ಟು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ತಿಳಿದುಬಂದಿದೆ.