ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮೂರು ವರ್ಷದ ಬಾಲಕಿ ವಿದ್ಯುತ್ ಸ್ಪರ್ಶಿಸಿ ಸಾವು!!

Share the Article

ಚಾಮರಾಜನಗರ: ಹುಟ್ಟುಹಬ್ಬ ಆಚರಿಸಬೇಕಿದ್ದ ಬಾಲಕಿಯೋರ್ವಳು ವಿದ್ಯುತ್ ಆಘಾತದಿಂದ ಯಮನಪಾದ ಸೇರಿದ ಮನಕರಗುವ ಘಟನೆ ಚಾಮರಾಜನಗರ ತಾಲೂಕಿನ ಕೆಂಗಾಕಿ ಗ್ರಾಮದಲ್ಲಿ ನಡೆದಿದೆ.

ಕೆಂಗಾಕಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದ ಮೂರು ವರ್ಷದ ನಿವೇದಿತಾ ಮೃತಪಟ್ಟ ಬಾಲಕಿ.

ನಿವೇದಿತಾ ಕುಟುಂಬ ತೋಟದ ಮನೆಯಲ್ಲಿ ವಾಸವಾಗಿತ್ತು.ಆಕೆ ಆಟ ಆಡುವ ವೇಳೆ ಅಚಾನಕ್ಕಾಗಿ ಪಂಪ್‌ಸೆಟ್ ಅನ್ನು ಬಾಲಕಿ ಮುಟ್ಟಿದ್ದಾಳೆ. ಪರಿಣಾಮ ವಿದ್ಯುತ್ ಸ್ಪರ್ಶಿಸಿ ಅವಘಡ ಸಂಭವಿಸಿ ಬಾಲಕಿ ಮೃತಪಟ್ಟಿದ್ದಾಳೆ.

ಮೃತ ನಿವೇದಿತಾ 3ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ ಮನೆಯೆಲ್ಲಾ ಸಿದ್ಧತೆಯೂ ನಡೆಯುತ್ತಿತ್ತು. ಕೇಕ್ ಕೂಡಾ ಮನೆಗೆ ತಂದಿದ್ದು, ಇನ್ನೇನು ಈ ಸಂಭ್ರಮ ಕಣ್ಣುಂಬುವುದು ಮಾತ್ರ ಬಾಕಿ ಇತ್ತು. ಆದರೆ ಕ್ಷಣ ಮಾತ್ರದಲ್ಲಿ ಮನೆಯಿಡೀ ದುಃಖದ ಛಾಯೆಯಲ್ಲಿ ಮುಳುಗುವ ಘಟನೆಯೊಂದು ನಡೆದಿತ್ತು. ಇನ್ನೇನು ಹೊಸಬಟ್ಟೆ ತೊಟ್ಟು ಕೇಕ್ ಕತ್ತರಿಸಿ ಸಂಭ್ರಮಿಸಬೇಕಿದ್ದ ಬಾಲಕಿ ನಿವೇದಿತ ಮೃತಪಟ್ಟಿದ್ದಾಳೆ.

ಈ ಬಗ್ಗೆ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply