Home News ರಾಜ್ಯಮಟ್ಟದ ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿಗೆ ದ.ಕ.ದಿಂದ ಸವಣೂರು ಪ.ಪೂ.ಕಾಲೇಜಿನ ಉಪನ್ಯಾಸಕ ಬಿ.ವಿ.ಸೂರ್ಯನಾರಾಯಣ ಆಯ್ಕೆ

ರಾಜ್ಯಮಟ್ಟದ ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿಗೆ ದ.ಕ.ದಿಂದ ಸವಣೂರು ಪ.ಪೂ.ಕಾಲೇಜಿನ ಉಪನ್ಯಾಸಕ ಬಿ.ವಿ.ಸೂರ್ಯನಾರಾಯಣ ಆಯ್ಕೆ

Hindu neighbor gifts plot of land

Hindu neighbour gifts land to Muslim journalist

ಸವಣೂರು: ಇಲ್ಲಿನ ಸರಕಾರಿ ಪ.ಪೂ.ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕರಾದ ಬಿ.ವಿ.ಸೂರ್ಯನಾರಾಯಣ ಅವರಿಗೆ ಮೈಸೂರಿನ ಶರಣ ವಿಶ್ವವಚನ ಫೌಂಡೇಶನ್ ಇವರು ನೀಡುವ 2021ನೇ ಸಾಲಿನ ರಾಜ್ಯಮಟ್ಟದ ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿಗೆ ದ.ಕ.ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.

ಬಿ.ವಿ.ಸೂರ್ಯನಾರಾಯಣ ಅವರು ಸವಣೂರು ಪ.ಪೂ.ಕಾಲೇಜಿಗೆ ಸುಮಾರು 1.20 ಕೋಟಿ ದೇಣಿಗೆಯನ್ನು ದಾನಿಗಳಿಂದ ಸಂಗ್ರಹಿಸಿ ತರಗತಿ ಕೊಠಡಿಗಳು,ಪ್ರಯೋಗಾಲಯಗಳು,ವಾಚನಾಲಯ, ಶೌಚಾಲಯ ಮೊದಲಾದ ಮೂಲಭೂತ ಸೌಕರ್ಯಗಳನ್ನು ಸಂಸ್ಥೆಗೆ ಕಲ್ಪಿಸಿದಲ್ಲದೆ ,ಸುಮಾರು 500 ಕ್ಕೂ ಮಿಕ್ಕಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಧೃತಿ ಫೌಂಡೇಶನ್ ಮಂಗಳೂರು ಸಂಸ್ಥೆಯ ಸ್ವಯಂ ಸೇವಕನಾಗಿ ಆರ್ಥಿಕ ನೆರವನ್ನು ಒದಗಿಸಿದ್ದಾರೆ.

ಅಲ್ಲದೆ ಉತ್ತಮ ತರಬೇತುದಾರರಾಗಿ ನಾಡಿನ ವಿವಿಧೆಡೆ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತು ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿದ್ದಾರೆ.
ಇವರು ಕಳೆದ 38 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿದ್ದಾರೆ.

ಪ್ರಶಸ್ತಿ ಪ್ರಧಾನ ಸಮಾರಂಭವು ಸೆ.26ರಂದು ಮೈಸೂರಿನಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.