ಅಟ್ಲಾಂಟಾ ಮೃಗಾಲಯದ ಗೊರಿಲ್ಲಾಗಳಿಗೆ ಕೊರೋನಸೋಂಕು ಧೃಡ

ಅಟ್ಲಾಂಟ ಮೃಗಾಲಯದ ಗೊರಿಲ್ಲಾ ಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.

ಕೊರೋನ ವೈರಸ್ನಿಂದ ಹರಡುವ ರೋಗವಾಗಿದೆ. ಈಗಾಗಲೇ ಮನುಷ್ಯರಲ್ಲಿ ಕೊರೋನ ಸೋಂಕು ಹರಡುತ್ತಿದೆ. ಆದರೆ ಈಗ ಕೊರೋನ ಸೋಂಕು ಪ್ರಾಣಿಗಳಲ್ಲಿ ಕಂಡುಬಂದ ವಿಚಾರ ಅಮೇರಿಕಾದಲ್ಲಿ ದೃಡಪಟ್ಟಿದೆ.
ಅಮೇರಿಕಾದ ಅಟ್ಲಾಂಟ ಮೃಗಾಲಯದಲ್ಲಿರುವ ಗೊರಿಲ್ಲಾ ಗಳಿಗೆ ಕೊರೋನ ಸೋಂಕು ದೃಡಪಟ್ಟಿದೆ.

ಕೊರೋನಾದ ಸಾಮಾನ್ಯ ಲಕ್ಷಣಗಳಾದ ಕೆಮ್ಮು, ನೆಗಡಿ ಮತ್ತು ಹಸಿವಿಲ್ಲದಿರುವಿಕೆ ಮುಂತಾದ ಲಕ್ಷಣಗಳು ಗೊರಿಲ್ಲಾ ಗಳಲ್ಲಿ ಕಂಡು ಬಂದಿರುವುದನ್ನು ಮೃಗಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗಮನಿಸಿದ್ದಾರೆ. ಆದ್ದರಿಂದ ಗೊರಿಲ್ಲಾಗಳ ಮಲ, ಮೂಗಿನ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಜಾರ್ಜಿಯ ವಿಶ್ವವಿದ್ಯಾಲಯದ ಪಶುವೈದ್ಯಕೀಯ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಗೊರಿಲ್ಲಾ ಗಳಿಗೆ ಸೋಂಕು ದೃಢಪಟ್ಟಿರುವ ವಿಚಾರ ತಿಳಿದು ಬಂದಿದೆ.

ಪ್ರಾಣಿಗಳನ್ನು ನೋಡಿಕೊಳ್ಳುವ ಸಿಬ್ಬಂದಿಗಳಲ್ಲಿ ಕೊರೋನ ಕಾಣಿಸಿಕೊಂಡಿದ್ದು, ಅವರಿಂದ ಪ್ರಾಣಿಗಳಿಗೂ ಕೊರೋನ ಸೋಂಕು ಹರಡಿದೆ ಎಂದು ಹೇಳಲಾಗುತ್ತಿದೆ.

ಗೊರಿಲ್ಲಾ ಗಳಿಗೆ ಸೋಂಕು ದೃಢಪಟ್ಟಿರುವ ಮಾಹಿತಿಯನ್ನು ಮೃಗಾಲಯವು ಏಮ್ಸ್ ನಲ್ಲಿರುವ ರಾಷ್ಟ್ರೀಯ ಪಶುವೈದ್ಯಕೀಯ ಸೇವಾ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದೆ.

Leave A Reply

Your email address will not be published.