ದೇಲಂಪಾಡಿ: ಧರ್ಮಸಿಂಧು ಪ್ರತಿಷ್ಟಾನ ಉದ್ಘಾಟನೆ
ಕಾಸರಗೋಡು: ಇಲ್ಲಿನ ದೇಲಂಪಾಡಿಯಲ್ಲಿ ’ಧರ್ಮಸಿಂಧು’ ಪ್ರತಿಷ್ಠಾನ ದೇಲಂಪಾಡಿ ಎಂಬ ನೂತನ ಸಂಸ್ಥೆಯು ಸೆ.10ರಂದು ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಇವರ ಆಶಿರ್ವಚನದೊಂದಿಗೆ ಶ್ರೀ ರಾಮ ಭಜನಾ ಮಂದಿರ ದೇಲಂಪಾಡಿ ಯಲ್ಲಿ ಉದ್ಘಾಟನೆಗೊಂಡಿತು.
ಈ ವೇಳೆ 2021ರ ಕೇರಳ ರಾಜ್ಯ ಅಧ್ಯಾಪಕ ಪುರಸ್ಕೃತರಾದ ನಾರಾಯಣ ಮಾಸ್ಟರ್ ದೇಲಂಪಾಡಿ ಇವರನ್ನು ಅಭಿನಂದಿಸಲಾಯಿತು. ಸಮಾರಂಭದ ವೇದಿಕೆಯ ಅಧ್ಯಕ್ಷತೆಯನ್ನು ಶಿವರಾಮ ಕಲ್ಲೂರಾಯ ವಹಿಸಿದ್ದು, ರವಿಕುಮಾರ್ ಬಂದ್ಯಡ್ಕ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಧರ್ಮಸಿಂಧು ಪ್ರತಿಷ್ಠಾನದ ಅಧ್ಯಕ್ಷರಾಗಿ ಶ್ರೀ ಪದ್ಮನಾಭ ರಾವ್ ಮಯ್ಯಾಳ, ಉಪಾಧ್ಯಕ್ಷರಾಗಿ ಗಣೇಶ್ ದೇಲಂಪಾಡಿ, ಕಾರ್ಯದರ್ಶಿ ಅಜಿತ್ ಮೆಣಸಿನಕಾನ, ಜತೆ ಕಾರ್ಯದರ್ಶಿ ವಿಕ್ರಾಂತ್ ಮಯ್ಯಾಳ, ಖಜಾಂಜಿ ಧನಂಜಯ ಬೆಳ್ಳಿಪ್ಪಾಡಿ, ಸಂಚಾಲಕರಾಗಿ ಚಂದ್ರಶೇಖರ ನೂಜಿಬೆಟ್ಟು, ನಿರ್ದೇಶಕರಾಗಿ ವಸಂತ ಅಡ್ಡಂತ್ತಡ್ಕ, ಬಾಲಕ್ರಷ್ಣ ಮಯ್ಯಾಳ, ಸಂಪತ್ ಊಜಂಪಾಡಿ, ಕೌಶಿಕ್ ಬೆಳ್ಳಿಪ್ಪಾಡಿ, ಅಭಿಷೇಕ್ ದೇಲಂಪಾಡಿ ಉಪಾಸ್ಥಿತರಿದ್ದರು.
ಪದ್ಮನಾಭ ಮಯ್ಯಾಳ ಪ್ರಾಸ್ತಾವಿಕ ಮಾತನಾಡಿ ಪ್ರತಿಷ್ಠಾನದ ಮುಂದಿನ ಯೋಜನೆ ಮುಷ್ಠಿ ಬಿಕ್ಷಾಭಿಯಾನ ಲಕ್ಷವ್ರಕ್ಷ ಅಭಿಯಾನ ಇತ್ಯಾದಿ ಘೋಷಿಸಲಾಯಿತು.
ವಿಕ್ರಾಂತ್ ಮಯ್ಯಾಳ ಸ್ವಾಗತಿಸಿ ಧನಂಜಯ ಬೆಳ್ಳಿಪ್ಪಾಡಿ ಧನ್ಯಗೈದರು, ಚಂದ್ರಶೇಖರ ನೂಜಿಬೆಟ್ಟು ನಿರೂಪಿಸಿದರು.