Home News ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರೇ ??? | ಹಾಗಾದರೆ ಈ ಕೆಲಸವನ್ನು ಆದಷ್ಟು...

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರೇ ??? | ಹಾಗಾದರೆ ಈ ಕೆಲಸವನ್ನು ಆದಷ್ಟು ಬೇಗ ಮುಗಿಸಿಕೊಳ್ಳಿ, ಇಲ್ಲದಿದ್ದರೆ ನಿಮ್ಮ ಅಕೌಂಟ್ ಸಿಲುಕಲಿದೆ ಒಂದು ಸಮಸ್ಯೆಯಲ್ಲಿ !!

Hindu neighbor gifts plot of land

Hindu neighbour gifts land to Muslim journalist

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದರೆ, ನಿಮ್ಮ ಅಕೌಂಟ್ ಈ ಬ್ಯಾಂಕ್‌ನಲ್ಲಿ ಇದ್ದರೆ ಕೂಡಲೇ ಈ ಒಂದು ಕೆಲಸವನ್ನು ನೀವು ಮಾಡಲೇಬೇಕಿದೆ. ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಅಕೌಂಟ್ ಸಮಸ್ಯೆಯಲ್ಲಿ ಸಿಲುಕಲಿದೆ.

ಅದೇನೆಂದರೆ, ಗ್ರಾಹಕರು ತಮ್ಮ ಕಾಯಂ ಖಾತೆ ಸಂಖ್ಯೆಯನ್ನು (PAN-ಪಾನ್) ತಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಬೇಕಿದೆ. ಇದಕ್ಕೆ ಈಗಾಗಲೇ ಹಲವು ಗಡುವು ಕೊಟ್ಟಿರುವ ಬ್ಯಾಂಕ್ ಇದೀಗ ಸೆಪ್ಟೆಂಬರ್ 30ರ ಗಡುವು ನೀಡಿದೆ. ಅವಧಿಯ ಒಳಗೆ ಪಾನ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕಿದೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬ್ಯಾಂಕ್ ಖುದ್ದು ಮಾಹಿತಿ ನೀಡಿದೆ. ಒಂದು ವೇಳೆ ಸೆ.30ರ ಒಳಗೆ ಈ ರೀತಿ ಮಾಡದೇ ಹೋದರೆ ಗ್ರಾಹಕರು ಸೇವೆಗಳನ್ನು ಪಡೆಯುವಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಬ್ಯಾಂಕ್ ಎಚ್ಚರಿಕೆ ನೀಡಿದೆ. ‘ನಮ್ಮ ಗ್ರಾಹಕರಿಗೆ ಅನಾನುಕೂಲತೆ ಆಗುವುದನ್ನು ತಪ್ಪಿಸಲು ಮತ್ತು ತಡೆರಹಿತ ಬ್ಯಾಂಕಿಂಗ್ ಸೇವೆಯನ್ನು ಆನಂದಿಸಲು ಆಧಾರ್‌ನೊಂದಿಗೆ ಪಾನ್ ನಂಬರ್ ಲಿಂಕ್ ಮಾಡಿ. ಇದು ಕಡ್ಡಾಯ’ ಎಂದು ಟ್ವೀಟ್ ಮೂಲಕ ಎಸ್‌ಬಿಐ ಸೂಚನೆ ನೀಡಿದೆ.

ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

  • ಮೊದಲಿಗೆ ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್ https://incometaxindiaefiling.gov ಕ್ಲಿಕ್ ಮಾಡಿ.
  • ಆಧಾರ್ ಲಿಂಕ್ ವಿಭಾಗ ನೋಡಿ, ಅಲ್ಲಿ
    ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿವರಗಳನ್ನು ನಮೂದಿಸಿ.
  • link Adhaar (‘ಲಿಂಕ್ ಆಧಾರ್’) ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಇಷ್ಟು ಮಾಡಿದರೆ ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಆಗಲಿದೆ.

  • ನೀವು https://www.utiitsl.com/ ಅಥವಾ
    https://www.egov-nsdl.co.in/ ಲಿಂಕ್‌ಗಳನ್ನು ಕ್ಲಿಕ್ ಮಾಡಿಯೂ ಇವುಗಳ ಜೋಡಣೆ ಮಾಡಬಹುದು.

ಎಸ್ಎಂಎಸ್ ಮೂಲಕ ಆಧಾರ್-ಪಾನ್ ಜೋಡಣೆ ಹೇಗೆ?

  • ಮೊದಲಿಗೆ ಫೋನ್‌ನಲ್ಲಿ UIDPAN ಎಂದು ಟೈಪ್ ಮಾಡಿ ಸ್ಪೇಸ್ ಕೊಟ್ಟು 12 ಅಂಕಿಯ ಆಧಾರ್ ಸಂಖ್ಯೆ ನಮೂದಿಸಿ, ಸ್ಪೇಸ್ ಕೊಟ್ಟು 10 ಅಂಕಿಯ ಪಾನ್ ಸಂಖ್ಯೆಯನ್ನು ನಮೂದಿಸಿ. (UIDPAN <12 Digit Aadhaar> <10 Digit PAN>) ಈಗ ಈ ಸಂದೇಶವನ್ನು 567678 ಅಥವಾ 56161 ಗೆ ಕಳುಹಿಸಿ. ನಿಮ್ಮ ಪಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ.

ಒಂದು ವೇಳೆ ಪಾನ್ ಕಾರ್ಡ್ ನಿಷ್ಕ್ರಿಯವಾಗಿದ್ದರೆ ಏನು ಮಾಡುವುದು?

ಇದಕ್ಕಾಗಿ, ನೀವು ಎಸ್ಎಂಎಸ್ ಕಳುಹಿಸಬೇಕು. ನಿಮ್ಮ ನೋಂದಾಯಿತ ಮೊಬೈಲ್‌ನಿಂದ ನೀವು 12 ಅಂಕಿಯ ಪಾನ್ ನಂಬರನ್ನು ನಮೂದಿಸಬೇಕು. ಇದರ ನಂತರ, ಸ್ಪೇಸ್ ನೀಡುವ ಮೂಲಕ 10-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ. ನಂತರ ಈ ಸಂದೇಶವನ್ನು 567678 ಅಥವಾ 56161 ಗೆ ಎಸ್ಎಂಎಸ್ ಮಾಡಬೇಕು.

ಈ ಮೇಲಿನ ಮಾಹಿತಿಗಳನ್ನು ಉಪಯೋಗಿಸಿಕೊಂಡು, ಆದಷ್ಟು ಬೇಗ ಎಸ್ಬಿಐ ಗ್ರಾಹಕರು ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ.