ಬೆಳ್ತಂಗಡಿ ತಾಲೂಕಿನ ಗಡಿಪ್ರದೇಶ ಪಾಂಡವರಕಲ್ಲಿನಲ್ಲಿ ಯುವಕನ ಬರ್ಬರ ಕೊಲೆ | ಕಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾದ ಅತ್ತೆ ಮಗ !!

Share the Article

ಬೆಳ್ತಂಗಡಿ ತಾಲೂಕಿನ ಗಡಿ ಪ್ರದೇಶವಾದ
ಪಾಂಡವರಕಲ್ಲಿನಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಪಾಂಡವರಕಲ್ಲು ನಿವಾಸಿ ರಫೀಕ್ (26) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಅವನ ಸಂಬಂಧಿಯೇ‌‌ ಆಗಿರುವ
ಸ್ವಂತ ಅತ್ತೆ ಮಗ ಸಿದ್ದೀಕ್ ಎಂಬವನೇ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಪುಂಜಾಲಕಟ್ಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಈ ಕೊಲೆ ನಡೆದಿದ್ದು, ರಫೀಕ್ ಮೃತದೇಹ ಬಂಟ್ವಾಳ ತಾಲೂಕಿನ ಕೋಡ್ಯಮಲೆ ಎಂಬಲ್ಲಿ ರಸ್ತೆ ಬದಿ ಪತ್ತೆಯಾಗಿದೆ. ಕ್ಷುಲ್ಲಕ ಕಾರಣಕ್ಕೆ ಕೊಲೆ ಆಗಿದೆ ಎಂದು ಅರಂಭಿಕ ಮಾಹಿತಿ ಲಭಿಸಿದೆ. ಕಟ್ಟಿಗೆಯಿಂದ ತಲೆಗೆ ಹೊಡೆದು ಸಾಯಿಸಿದಂತೆ ಕಾಣುತ್ತಿದೆ.

ಜೀನ್ಸ್ ಪ್ಯಾಂಟ್ ಮತ್ತು ಕೆಂಪು ಬಣ್ಣದ ಶರ್ಟ್ ಧರಿಸಿರುವ ರಫೀಕ್ ಮೃತದೇಹ ಅಂಗಾತ ಮಲಗಿದ ಸ್ಥಿತಿಯಲ್ಲಿ ಕಾಡಿನ ಬದಿ ಪತ್ತೆಯಾಗಿದೆ.

ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್, ಪುಂಜಾಲಕಟ್ಟೆ ಠಾಣಾ ಎಸ್ ಐ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮಹಜರು ನಡೆಸುತ್ತಿದ್ದಾರೆ. ಆರೋಪಿ ಸಿದ್ದೀಕ್ ಪರಾರಿಯಾಗಿದ್ದು ಪತ್ತೆಗೆ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Leave A Reply