Home latest ಕೋವಿಡ್ ಪ್ರಕರಣ ಹೆಚ್ಚಳ|ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನಕ್ಕೆ ನಾಲ್ವರ ಬಲಿ|ದೇಶದಲ್ಲಿ ಮೃತರ ಸಂಖ್ಯೆ 338...

ಕೋವಿಡ್ ಪ್ರಕರಣ ಹೆಚ್ಚಳ|ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನಕ್ಕೆ ನಾಲ್ವರ ಬಲಿ|ದೇಶದಲ್ಲಿ ಮೃತರ ಸಂಖ್ಯೆ 338 ಕ್ಕೆ ಹೆಚ್ಚಳ!!

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಕೋವಿಡ್ ನಿಂದ ಮೃತ ಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,ಸೆ.11 ರಂದು ದ.ಕ. ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ನಾಲ್ವರು ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ 343 ಮಂದಿ ಗುಣಮುಖರಾಗಿದ್ದು,133 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ.ಜಿಲ್ಲೆಯ ಪಾಸಿಟಿವಿಟಿ ದರ ಶೇ.1.35ಕ್ಕೆ ಇಳಿಕೆಯಾಗಿದೆ. ಜಿಲ್ಲೆಯಲ್ಲಿನ 1,12,193 ಸೋಂಕಿತರ ಪೈಕಿ 1,08,771 ಮಂದಿ ಕೊರೋನದಿಂದ ಮುಕ್ತರಾಗಿದ್ದಾರೆ.

ಕೋವಿಡ್‌ಗೆ ಇಲ್ಲಿಯವರೆಗೆ 1610 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 1812 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 28,591 ಜನ
ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ದೇಶದಲ್ಲಿ
ಒಟ್ಟು ಸೋಂಕಿತರ ಸಂಖ್ಯೆ 3,32,36,921 ಕ್ಕೆ
ಮುಟ್ಟಿದೆ. ನಿನ್ನೆ ದೇಶದಲ್ಲಿ 338 ಜನ ಮೃತಪಟ್ಟಿದ್ದಾರೆ.
ಇದುವರೆಗೆ 4,42,655 ಜನ ಬಲಿಯಾಗಿದ್ದಾರೆ.