Home latest ಮುಂಬೈ ಘಟನೆ ಮಾಸುವ ಮುನ್ನವೇ ಚೆನ್ನೈನಲ್ಕಿ ನಡೆಯಿತು ಇನ್ನೊಂದು ಹೇಯ ಕೃತ್ಯ | ಯುವತಿಗೆ ಮತ್ತು...

ಮುಂಬೈ ಘಟನೆ ಮಾಸುವ ಮುನ್ನವೇ ಚೆನ್ನೈನಲ್ಕಿ ನಡೆಯಿತು ಇನ್ನೊಂದು ಹೇಯ ಕೃತ್ಯ | ಯುವತಿಗೆ ಮತ್ತು ಬರಿಸುವ ತಿಂಡಿ ನೀಡಿ ಸಾಮೂಹಿಕ ಅತ್ಯಾಚಾರ

Hindu neighbor gifts plot of land

Hindu neighbour gifts land to Muslim journalist

ಚಲಿಸುತ್ತಿದ್ದ ಕಾರಿನಲ್ಲಿ 20 ವರ್ಷ ವಯಸ್ಸಿನ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ತಮಿಳುನಾಡಿನ ಚೆನ್ನೈನ ಮೆಲ್ಕತಿರ್​ಪುರ ಗ್ರಾಮದ ಬಳಿ ಎರಡು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿಗೆ ಡ್ರಗ್ಸ್​ ನೀಡಿ ಅತ್ಯಾಚಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿತರನ್ನು ಗುಣಶೀಲನ್, ಜೆಬನೇಸನ್, ಗುಣಶೇಖರನ್ ಮತ್ತು ಅಜಿತ್ ಎಂದು ಗುರುತಿಸಲಾಗಿದೆ.

ಸಂತ್ರಸ್ಥ ಯುವತಿ ಖಾಸಗಿ ಮೊಬೈಲ್​ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈಕೆ ಮತ್ತು ಗುಣಶೀಲನ್​ ಇಬ್ಬರೂ ಆನ್​ಲೈನ್​ ಆ್ಯಪ್​ವೊಂದರ ಮೂಲಕ ಸ್ನೇಹಿತರಾಗಿದ್ದರು. ಬುಧವಾರ ಗುಣಶೀಲನ್ ತನ್ನ ಕಾರಿನಲ್ಲಿ​ ಆ ಯುವತಿಯನ್ನು ಅಂಗಡಿಯಿಂದ ಕರೆದುಕೊಂಡು ಹೋಗಿ ಅಲ್ಲಿಂದ ಕಾಂಚಿಪುರಂನಲ್ಲಿರುವ ಆತನ ಫಾರ್ಮ್​ಹೌಸ್​ಗೆ ಕರೆದುಕೊಂಡು ಹೋಗಿದ್ದನು.

ಅಲ್ಲಿ ಯುವತಿಗೆ ತಿಂಡಿ ನೀಡಿದ್ದು, ಅದಕ್ಕೆ ನಿದ್ರೆ ಬರುವ ಔಷಧಿಯ ಲೇಪನವನ್ನು ಸವರಲಾಗಿತ್ತು. ಜತೆಗೆ ಪಾನೀಯವನ್ನೂ ನೀಡಲಾಗಿತ್ತು. ಮತ್ತೇರಿದ ಆಕೆ ನಿದ್ರೆಗೆ ಜಾರುತ್ತಿದ್ದಂತೆ ಗುಣಶೀಲನ್​ ಮತ್ತು ಆತನ ಸ್ನೇಹಿತರು ಸೇರಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ.

ತನ್ನ ಮೇಲೆ ಅತ್ಯಾಚಾರ ನಡೆಯುತ್ತಿದ್ದಾಗಲೇ ಆ ಯುವತಿಗೆ ಎಚ್ಚರವೇನೋ ಆಗಿದೆ. ಆಕೆ ತಪ್ಪಿಸಿಕೊಳ್ಳಲು ಕಾರಿನ ಕಿಟಕಿ ಒಡೆಯಲು ಯತ್ನಿಸಿದ್ದಾಳೆ. ಆದರೆ ಪ್ರಯೋಜನ ಆಗಲಿಲ್ಲ. ಸ್ಥಳದಲ್ಲಿ ಗಲಾಟೆ ಕೇಳುತ್ತಿದ್ದಂತೆ ಸ್ಥಳೀಯರು ಅಲ್ಲಿಗೆ ಆಗಮಿಸಿದ್ದಾರೆ. ಜನರು ಬರುತ್ತಿರುವುದನ್ನು ನೋಡಿದ ಆರೋಪಿಗಳು ಅಲ್ಲಿಂದ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಬಳಿಕ ಅಸ್ವಸ್ಥಳಾದ ಆ ಯುವತಿಯನ್ನು ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಟ್ಟು ಹೋಗಿದ್ದರು.

ಆ ಯುವತಿ ಸುಧಾರಿಸಿಕೊಂಡು ಸಮೀಪದ ಪೊಲೀಸ್​ ಠಾಣೆಗೆ ಹೋಗಿ, ದೂರು ನೀಡಿದ್ದಳು. ನಂತರ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಬಳಿಕ ಆಕೆ ನೀಡಿದ ಮಾಹಿತಿಯಂತೆ ಐವರಲ್ಲಿ ನಾಲ್ಕು ಮಂದಿಯನ್ನು ಬಂಧಿಸಲಾಯಿತು. ಐವರು ಈ ದುಷ್ಕೃತ್ಯ ಎಸಗಿದ್ದು, ಓರ್ವ ಪರಾರಿಯಾಗಿದ್ದಾನೆ.