Home latest ತನ್ನ 10 ವರ್ಷದ ಮಗನನ್ನು ನೋಡಿಕೊಳ್ಳಲು ಕಷ್ಟ ಎಂದು ರೌಡಿ ಶೀಟರ್ ಗೆ ಒಪ್ಪಿಸಿದ ಮಹಿಳೆ...

ತನ್ನ 10 ವರ್ಷದ ಮಗನನ್ನು ನೋಡಿಕೊಳ್ಳಲು ಕಷ್ಟ ಎಂದು ರೌಡಿ ಶೀಟರ್ ಗೆ ಒಪ್ಪಿಸಿದ ಮಹಿಳೆ | ಮುಂದೆ ಅದೇ ಆಯ್ತು !!

Hindu neighbor gifts plot of land

Hindu neighbour gifts land to Muslim journalist

ತನ್ನ ಮಗು ತಾಯಿಗೆ ಎಂದೂ ಭಾರವಲ್ಲ. ಎಷ್ಟು ಕಷ್ಟ ಇದ್ದರೂ ಆಕೆ ತನ್ನ ಮಗುವಿಗೆ ಎಂದೂ ತೋರ್ಪಡಿಸದೆ ಕೇವಲ ಪ್ರೀತಿಯನ್ನು ಮಾತ್ರ ಉಣಬಡಿಸುವವಳು. ಆದರೆ ಇಲ್ಲೊಂದು ಘಟನೆ ವಿಚಿತ್ರವಾಗಿ ನಡೆದಿದೆ.ತಾಯಿಯೊಬ್ಬಳು ತನ್ನ 10 ವರ್ಷದ ಮಗನನ್ನು ನೋಡಿಕೊಳ್ಳಲು ಕಷ್ಟ ಎಂದು ರೌಡಿಶೀಟರ್ ಬಳಿ ಬಿಟ್ಟಿದ್ದಳು. ಅಷ್ಟಕ್ಕೂ ಮುಂದೆ ನಡೆದಿದ್ದೇನು ಗೊತ್ತೇ!!?

ಹೌದು ಇಂತಹುದೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಾಯಿಯೋರ್ವಳು ತನ್ನ ಹತ್ತು ವರ್ಷದ ಮಗನನ್ನು ರೌಡಿ ಶೀಟರ್ ಸುನಿಲ್ ಎಂಬಾತನ ಬಳಿ ಬಿಟ್ಟಿದ್ದಳು. ಆದರೆ ಅಲ್ಲಿ ನಡೆದಿದ್ದೆ ಬೇರೆ.ಬಾಲಕನನ್ನು ನೋಡಿಕೊಳ್ಳಬೇಕಿದ್ದ ಆತ ಪ್ರತಿನಿತ್ಯ ಹಿಂಸೆ ನೀಡಿ, ಹತ್ಯೆ ಮಾಡಿದ ಅಮಾನುಷ ಘಟನೆ ಮೈಕೋ ಲೇಔಟ್ ನಲ್ಲಿ ಸಂಭವಿಸಿದೆ.

ಅಷ್ಟಕ್ಕೂ ಆ ಮಹಿಳೆ ಆ ರೌಡಿ ಶೀಟರ್ ಬಳಿ ಬಿಟ್ಟಿದ್ದಾದರೂ ಏಕೆ ಎಂಬುದೇ ಅನುಮಾನ. ನಂಬಿಕೆ ಇಲ್ಲದೆ ಆ ವ್ಯಕ್ತಿ ಬಳಿ ಹೇಗೆ ತನ್ನ ಮಗುವನ್ನು ಬಿಟ್ಟಳು ಎಂಬುದೇ ಪ್ರಶ್ನೆ ಆಗಿದೆ.

ಮಗನನ್ನು ನೋಡಿಕೊಳ್ಳುವುದಾಗಿ ಒಪ್ಪಿಕೊಂಡಿದ್ದ ಸುನೀಲ್ ಜನವರಿಯಿಂದ ತಮ್ಮ ಮನೆಯಲ್ಲೇ ಇರಿಸಿಕೊಂಡಿದ್ದ.ಆದರೆ ಆತ ಬಾಲಕನನ್ನು ನೋಡಿಕೊಳ್ಳುವ ಬದಲು ಕೊಠಡಿಯಲ್ಲಿ ಕೂಡಿ ಹಾಕಿ ಪ್ರತಿನಿತ್ಯ ಹೊಡೆದು ಚಿತ್ರಹಿಂಸೆ ನೀಡುತ್ತಿದ್ದ. ಕೊನೆಗೆ ಸುನೀಲ್ ಹಿಂಸೆ ತಡೆಯಲಾರದೇ ಬಾಲಕ ಫೆಬ್ರವರಿಯಲ್ಲೇ ಪ್ರಾಣಬಿಟ್ಟಿದ್ದ.ಮೃತಪಟ್ಟ ಬಾಲಕನ ಮೃತದೇಹವನ್ನು ಸಿಂಧು ಜೊತೆ ಸೇರಿಕೊಂಡು ಸುನೀಲ್ ಮೈಕೋ ಲೇಔಟ್ ನಿಂದ ತಮಿಳುನಾಡಿನ ನಿರ್ಜನ ಪ್ರದೇಶದಲ್ಲಿ ಬಿಸಾಡಿ ಬಂದಿದ್ದರು.

ಸುನೀಲ್ ಮತ್ತು ಸಿಂಧೂ ನಡುವಿನ ಅಕ್ರಮ ಸಂಬಂಧಕ್ಕೆ ಬಾಲಕ ಮುಳ್ಳಾಗಿದ್ದ ಎಂಬ ಕಾರಣಕ್ಕೆ ಹಿಂಸೆ ನೀಡಿ ಹತ್ಯೆ ಮಾಡಲಾಗಿದೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ತಮಿಳುನಾಡಿದಲ್ಲಿ ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದ್ದರೂ ಗುರುತು ಪತ್ತೆಯಾಗದ ಕಾರಣ ಪ್ರಕರಣ ಅಲ್ಲಿಗೆ ನಿಂತಿತ್ತು. ಆದರೆ ಮಗ ಸಿಗದ ಕಾರಣ ತಾಯಿ 7 ತಿಂಗಳ ನಂತರ ನಾಪತ್ತೆ ಪ್ರಕರಣ ದಾಖಲಿಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ.

ಮಗು ಎಲ್ಲಿ ಇತ್ತು? ಯಾರ ಮನೆಗೆ ಬಿಟ್ಟಿದ್ದೀರಿ ಎಂಬಲ್ಲಿಂದ ತನಿಖೆ ಆರಂಭಿಸಿದ ಪೊಲೀಸರು ಸುನೀಲ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಗು ಮೃತಪಟ್ಟ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.ಸಿಂಧೂ ಮತ್ತು ಸುನಿಲ್ ಅವರನ್ನು ಪೊಲೀಸರು ಬಂಧಿಸಿದ್ದು, ಮೈಕೋ ಲೇಔಟ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.