ಉದನೆ:ಗಣೇಶ ಹಬ್ಬದಂದೇ ಸಾರ್ವಜನಿಕ ಗಣಪತಿ ಕಟ್ಟೆಯನ್ನು ಪುಡಿಗೈದ ದುಷ್ಕರ್ಮಿಗಳು!!ಪೂರ್ವ ದ್ವೇಷದಿಂದ ಕೃತ್ಯ ಎಸಗಿರುವ ಶಂಕೆ

Share the Article

ನೆಲ್ಯಾಡಿ ಸಮೀಪದ ಉದನೆ ಎಂಬಲ್ಲಿ ಸಾರ್ವಜನಿಕ ಗಣೇಶ ಕಟ್ಟೆಯನ್ನು ಕಿಡಿಗೇಡಿಗಳು ಪುಡಿಮಾಡಿರುವ ವಿಚಾರ ಬೆಳಕಿಗೆ ಬಂದಿದ್ದು,ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನಿನ್ನೆ ತಾನೇ ಉದನೆಯಲ್ಲಿ ಸರ್ಕಾರದ ನಿಯಮದ ಪ್ರಕಾರ ಸಾರ್ವಜನಿಕ ಗಣೇಶೋತ್ಸವ ನಡೆದಿದ್ದು, ಆ ಬಳಿಕ ನಿನ್ನೆ ರಾತ್ರಿಯ ಸಮಯ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಗೆ ಪೂರ್ವ ದ್ವೇಷವಿದೆಯೇ?
ಸಾರ್ವಜನಿಕ ಗಣೇಶ ಕಟ್ಟೆಯ ಬಳಿಯಲ್ಲಿ ನದಿಯೊಂದು ಹರಿಯುತ್ತಿದ್ದೂ, ಆ ನದಿಯಲ್ಲಿ ಸ್ಪೋಟಕ ಬಳಸಿ ಮೀನು ಹಿಡಿಯಲು ಅನ್ಯಮತೀಯರು ಆಗಮಿಸುತ್ತಿರುವುದನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಲವಾರು ಬಾರಿ ವಿರೋಧಿಸಿತ್ತು. ಇದೇ ದ್ವೇಷ ಘಟನೆಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರಾದರೂ ತನಿಖೆಯ ಬಳಿಕ ಸತ್ಯಾಂಶ ಹೊರಬರಲಿದೆ.

ಸದ್ಯ ಕಿಡಿಗೇಡಿಗಳ ಕೃತ್ಯವನ್ನು ವಿಶ್ವ ಹಿಂದೂ ಪರಿಷತ್ ಭಜರಂಗದಳ ಕಡಬ ಪ್ರಖಂಡವು ಖಂಡಿಸಿದ್ದು,ವಿಕೃತಿ ಮೆರೆದ ಕಿಡಿಗೇಡಿಗಳ ಶೀಘ್ರ ಬಂಧನವಾಗಬೇಕು, ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದೆ.

Leave A Reply