ಟೆಕ್ ಸಂವೇದ ಸುಳ್ಯ ಶಾಖೆ ಜ್ಞಾನದೀಪದಲ್ಲಿ ಆರಂಭ
ಮಕ್ಕಳಿಗೆ ರೊಬೋಟಿಕ್ ಲ್ಯಾಬ್ ಮೂಲಕ ತರಬೇತಿ ನೀಡಿ ವಿಜ್ಞಾನ, ಗಣಿತ ಮತ್ತು ತಂತ್ರಜ್ಞನದ ಬಗ್ಗೆ ಕುತೂಹಲ ಹೆಚ್ಚಿಸಿ ಪ್ರೋತ್ಸಾಹ ನೀಡುವ ಟೆಕ್ ಅನ್ವೇಷಣದ ಟೆಕ್ ಸಂವೇದ ಸುಳ್ಯ ಶಾಖೆ ಶ್ರೀಹರಿ ವಾಣಿಜ್ಯ ಸಂಕೀರ್ಣದಲ್ಲಿರುವ ಜ್ಞಾನದೀಪ ಸಂಸ್ಥೆಯಲ್ಲಿ ಸೆ.9ರಂದು ಉದ್ಘಾಟನೆಗೊಂಡಿದೆ.
ಮಾಣಿಬೆಟ್ಟು ಶಿವರಾಮ ಗೌಡರು ಉದ್ಘಾಟಿಸಿದರು. ಟೆಕ್ನೊ ಅನ್ವೇಷಣ ಮಂಡ್ಯದ ಸಂಚಾಲಕರಾದ ಅವಿನಾಶ್ ಎ. , ಟೆಕ್ ಸಂವೇದದ ಸಂಚಾಲಕರುಗಳಾದ ಗಣೇಶ್ ಎಂ.ಎಸ್, ಕಿರಣ್ ಬಿ.ವಿ. ಹಾಗೂ ಪುರೋಹಿತ ನಾಗರಾಜ ಭಟ್ ಉಪಸ್ಥಿತರಿದ್ದರು.
ಏನಿದು ರೊಬೋಟಿಕ್ ಲ್ಯಾಬ್?
ಟೆಕ್-ಸಂವೇದವೂ ಟೆಕ್ನೋ ಅನ್ವೇಷಣದ ಸಹ ಸಂಸ್ಥೆಯಾಗಿದೆ. ಸಂಸ್ಥೆಯು ರೊಬೋಟಿಕ್ ಲ್ಯಾಬ್ ಮೂಲಕ ಮಕ್ಕಳಿಗೆ ವಿಜ್ಞಾನ,ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗು ಗಣಿತದ ಬಗ್ಗೆ ತರಬೇತಿ ನೀಡಿ ವಿಜ್ಞಾನ ಮತ್ತು ತಂತ್ರಜ್ಞಾನದ ಕುತೂಹಲ ಹೆಚ್ಚಿಸುತ್ತದೆ. ಈ ಪ್ರಾಯೋಗಿಕ ತರಗತಿಯಲ್ಲಿ ಸಮಸ್ಯೆ ಪರಿಹರಿಸು ಕೌಶಲ್ಯ, ಪ್ರೋಗ್ರಾಂ ಮತ್ತು ರೊಬೋಟ್ ನಿಯಂತ್ರಣ, ಭಾಗಗಳನ್ನು ಗುರುತಿಸುವುದು, ಸೆನ್ಸಾರ್ ಮತ್ತು ಮೊಟಾರ್ ಅಸೆಂಬ್ಲಿಂಗ್, ಗೇರ್ ನಿಯಂತ್ರಣ, ವಿಜ್ಞಾನ ಮತ್ತು ಗಣಿತಶಾಸ್ತ್ರದ ಪರಿಕಲ್ಪನೆಯೊಂದಿಗೆ ತಿಳುವಳಿಕೆ ಮೂಡಿಸಲಾಗುತ್ತದೆ. ಸುೆಳ್ಯ ಶಾಖೆಯು ಜ್ಞಾನದೀಪ ಸಂಸ್ಥೆಯ ಸಹಯೋಗದಲ್ಲಿ ಕಾರ್ಯನಿರ್ವಹಿಸಲಿದೆ.