ಧರ್ಮಸ್ಥಳ | ಹತ್ಯಡ್ಕ ಸಮೀಪ ನಡೆದಿದ್ದ ಸಾಕೆಮ್ಮ ಹತ್ಯೆಯ ಆರೋಪಿಗಳನ್ನು ಬಂಧಿಸುವಂತೆ ಹಿಂ.ಜಾ.ವೇ ಕಡೆಯಿಂದ ಮನವಿ

Share the Article

ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಸಮೀಪ ಸೆಪ್ಟೆಂಬರ್ 7ರಂದು ಗುಂಡು ಹಾರಿಸಿ ಸಾಕು ಎಮ್ಮೆಯನ್ನು ಹತ್ಯೆ ಮಾಡಿದ ಘಟನೆಯನ್ನು ಹಿಂ.ಜಾ.ವೇ. ಕೊಕ್ಕಡ ವಲಯವೂ ತೀವ್ರವಾಗಿ ಖಂಡಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕೆಂದು ಕೊಕ್ಕಡ ವಲಯ ಹಿಂದು ಜಾಗರಣ ವೇದಿಕೆ ವತಿಯಿಂದ ಧರ್ಮಸ್ಥಳ ಪೋಲಿಸ್ ಠಾಣೆಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಲಯಾಧ್ಯಕ್ಷ ರೂಪೇಶ್ ಶಿಶಿಲ, ಪ್ರಧಾನ ಕಾರ್ಯದರ್ಶಿ ಸಚಿನ್ ಕೊಕ್ಕಡ, ಶಿಶಿಲ ಘಟಕದ ಕಾರ್ಯದರ್ಶಿ ಯತೀಶ್ ಪೇರಿಕೆ, ಕೊಕ್ಕಡ ಘಟಕದ ಕಾರ್ಯದರ್ಶಿ ವಿನಯ್, ಸಂಪರ್ಕ ಪ್ರಮಖ್ ಉಮೇಶ್ ಕೊಕ್ಕಡ, ಶೋಭಿತ್ ಶಿಶಿಲ ಉಪಸ್ಥಿತರಿದ್ದರು.

Leave A Reply