Home News ತನ್ನ ಉತ್ಪನ್ನಗಳ ಬೆಲೆ ಏರಿಸಿ ಗ್ರಾಹಕರಿಗೆ ಶಾಕ್ ನೀಡಿದ‌ ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ | ಸರ್ಫ್...

ತನ್ನ ಉತ್ಪನ್ನಗಳ ಬೆಲೆ ಏರಿಸಿ ಗ್ರಾಹಕರಿಗೆ ಶಾಕ್ ನೀಡಿದ‌ ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ | ಸರ್ಫ್ ಎಕ್ಸೆಲ್, ಲೈಫ್ ಬಾಯ್, ರಿನ್ ಎಲ್ಲವೂ ಇನ್ನು ಮುಂದೆ ದುಬಾರಿ !!

Hindu neighbor gifts plot of land

Hindu neighbour gifts land to Muslim journalist

ಸೋಪ್ ಮತ್ತು ಡಿಟರ್ಜೆಂಟ್ ಮಾರಾಟದಲ್ಲಿ ಸಿಂಹಪಾಲು ಹೊಂದಿರುವ ಗ್ರಾಹಕ ಸರಕುಗಳ ದೈತ್ಯ, ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ತನ್ನ ಉತ್ಪನ್ನಗಳ ಬೆಲೆಯನ್ನು ಹೆಚ್ಚು ಮಾಡಿದೆ. ಕಳೆದ ತಿಂಗಳಷ್ಟೇ ಬೆಲೆ ಏರಿಸಿದ್ದ ಈ ಸಂಸ್ಥೆ, ಈಗ ಪುನಃ ಬೆಲೆ ಏರಿಕೆ ಮಾಡಿದ್ದು, ಗ್ರಾಹಕರಿಗೆ ಬರೆ ಬಿದ್ದಂತಾಗಿದೆ.

ಲಾಂಡ್ರಿ ಮತ್ತು ದೇಹ-ಶುದ್ದೀಕರಣ ವಿಭಾಗಗಳಲ್ಲಿನ ತನ್ನ ಉತ್ಪನ್ನಗಳ ಬೆಲೆಗಳನ್ನು ಇದು ಹೆಚ್ಚಿಸಿರುವ ಕಾರಣ, ಸರ್ಫ್ ಎಕ್ಸೆಲ್, ಲೈಫ್‌ಬಾಯ್, ರಿನ್, ವೀಲ್ ಸೇರಿದಂತೆ ಹಲವು ಸೋಪು ಹಾಗೂ ಸೋಪಿನ ಪೌಡರ್‌ಗಳ ಬೆಲೆ ಏರುಮುಖವಾಗಿದೆ.

ಕಳೆದ ತಿಂಗಳಷ್ಟೇ ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಡಿಟರ್ಜೆಂಟ್ ಗಳು ಮತ್ತು ಸೋಪ್ ಬಾರ್ ಗಳ ಬೆಲೆಗಳನ್ನು ಶೇಕಡ 3.5 ರಿಂದ 14ಕ್ಕೆ ಏರಿಸಿತ್ತು. ಈಗ ಪುನಃ ಬೆಲೆ ಏರಿಕೆ ಮಾಡಿದೆ. ಇದರಿಂದ ಅರ್ಧ ಮತ್ತು ಒಂದು ಕೆ.ಜಿ. ಪೌಡರ್ ಬೆಲೆಯಲ್ಲಿ ಏರಿಕೆಯಾಗಲಿದೆ.

ರಿನ್ ಡಿಟರ್ಜೆಂಟ್ ಪೌಡರ್ ಒಂದು ಕಿಲೋ ಪ್ಯಾಕೆಟ್ ಗೆ 77 ರೂ. ಗಳ ಬದಲಾಗಿ 82 ರೂ. ಏರಿದ್ದರೆ, ಸರ್ಫ್ ಎಕ್ಸೆಲ್ ಒಂದು ಕಿಲೋಗ್ರಾಂ ಪ್ಯಾಕೆಟ್‌ಗೆ 14 ರೂ. ಹೆಚ್ಚಳವಾಗಿದೆ. ಲಕ್ಸ್ ಮತ್ತು ಲೈಫ್‌ಬಾಯ್ ಇತ್ಯಾದಿ ಸಾಬೂನುಗಳ ಬೆಲೆಗಳು ಶೇಕಡಾ 8-12 ರಷ್ಟು ಬೆಲೆ ಏರಿಕೆಯನ್ನು ಕಂಡಿವೆ.

ಉಳಿದವುಗಳಲ್ಲಿ ಕೂಡ 5-10 ರೂಪಾಯಿ ಏರಿಕೆಯಾಗಲಿದೆ. ಅಷ್ಟೇ ಅಲ್ಲದೇ ಸ್ಯಾಷೆಯಲ್ಲಿ ಸಿಗುತ್ತಿದ್ದ ಪೌಡರ್‌ಗಳ ವೇಟೇಜ್ ಕಡಿಮೆ ಮಾಡಲಾಗಿದ್ದು, ದರವನ್ನು ಮಾತ್ರ ಹೆಚ್ಚಿಸಲಾಗಿದೆ. 150 ಗ್ರಾಂ ತೂಕವನ್ನು ಹೊಂದಿದ್ದ ಸ್ಯಾಷೆಗಳ ವೇಟೇಜ್ ಅನ್ನು 130 ಗ್ರಾಂಗಳಿಗೆ ಇಳಿಸಲಾಗಿದ್ದು, ಕೆಲವು ಸ್ಯಾಷೆಗಳ ಬೆಲೆ ಏರಿಕೆ ಮಾಡಲಾಗಿದೆ.