Home News ಸುಳ್ಯ :ಪರಿಚಿತ ಯುವಕನೊಂದಿಗೆ ಎರಡು ಮಕ್ಕಳ ತಾಯಿ ಪರಾರಿ ಪ್ರಕರಣ | ನಿನ್ನೆ ಸಂಜೆ ವೇಳೆಗೆ...

ಸುಳ್ಯ :ಪರಿಚಿತ ಯುವಕನೊಂದಿಗೆ ಎರಡು ಮಕ್ಕಳ ತಾಯಿ ಪರಾರಿ ಪ್ರಕರಣ | ನಿನ್ನೆ ಸಂಜೆ ವೇಳೆಗೆ ಸುಳ್ಯ ಠಾಣೆಗೆ ಹಾಜರಾದ ಮಹಿಳೆ,ಇತ್ತ ಪತ್ನಿ ಮರಳಿ ಸಿಗುತ್ತಾಳೆಂದು ಕಾದಿದ್ದ ಗಂಡನಿಗೆ ನಿರಾಸೆ!!

Hindu neighbor gifts plot of land

Hindu neighbour gifts land to Muslim journalist

ಕೆಲ ದಿನಗಳ ಹಿಂದೆ ಪರಿಚಿತ ಯುವಕನೊಂದಿಗೆ ಪರಾರಿಯಾಗಿದ್ದ ಎರಡು ಮಕ್ಕಳ ತಾಯಿಯು ನಿನ್ನೆ ಸಂಜೆ ಸುಳ್ಯ ಪೊಲೀಸ್ ಠಾಣೆಗೆ ಹಾಜರಾಗಿದ್ದು, ಇತ್ತ ಆ ಮಹಿಳೆಯ ಬರುವಿಕೆಗಾಗಿ ಕಾಯುತ್ತಿದ್ದ ಮಹಿಳೆಯ ಪತಿ ಹಾಗೂ ಪತಿಯ ಮನೆಯವರೊಂದಿಗೆ ತೆರಳುವುದಿಲ್ಲ, ಮುಂದಿನ ದಿನಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದಾಗಿ ಮಹಿಳೆ ಹೇಳಿಕೆಯನ್ನು ನೀಡಿದ್ದಾರೆ.

ಘಟನೆ ವಿವರ:ತನ್ನ ಮನೆಗೆ ಸಂಬಂಧಿಕರ ನೆಪದಲ್ಲಿ ಬರುತ್ತಿದ್ದ ಯುವಕ, ತನ್ನ ಮಡದಿಯನ್ನು ಪುಸಲಾಯಿಸಿ ಆತನೊಂದಿಗೆ ಕರೆದುಕೊಂಡು ಹೋಗಿದ್ದಾನೆ ಎಂದು ಮಹಿಳೆಯ ಪತಿ ಸುಳ್ಯ ಜಯನಗರ ಕೊಯಿಂಗೋಡಿ ನಿವಾಸಿ ಭರತ್ ರವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಇಬ್ಬರು ಮಕ್ಕಳಿರುವ ಮಹಿಳೆ ಯುವಕನೊಂದಿಗೆ ತೆರಳಿರುವ ಪ್ರಕರಣವನ್ನು ಗಂಭೀರವಾಗಿ ಪರಿಶೀಲಿಸಿದ ಸುಳ್ಯ ಪೊಲೀಸರು ಇಬ್ಬರನ್ನೂ ಠಾಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಆದರೆ ನಿನ್ನೆ ಸಂಜೆ ವೇಳೆಗೆ ಪರಾರಿಯಾದ ಮಹಿಳೆ ಮಾತ್ರ ಠಾಣೆಗೆ ಹಾಜರಾಗಿದ್ದು, ತಾನು ಪರಾರಿಯಾದ ಯುವಕನೊಂದಿಗೇ ಬಾಳ್ವೆ ನಡೆಸುತ್ತೇನೆ, ಗಂಡ ಹಾಗೂ ಗಂಡನ ಮನೆಯವರ ಕಿರುಕುಳದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂಬ ಹೇಳಿಕೆ ನೀಡಿದರು.ಇತ್ತ ಪತ್ನಿ ಮರಳಿ ಬರುತ್ತಾಳೆ ಎಂದು ಠಾಣೆ ಮುಂಭಾಗ ಕೂತಿದ್ದ ಆಕೆಯ ಪತಿ ಹಾಗೂ ಮನೆಯವರು, ಆಕೆ ಬರುವುದಿಲ್ಲವೆಂದು ತಿಳಿದಾಗ ಬೇಸರಗೊಂಡರಲ್ಲದೇ, ಈ ಬಗ್ಗೆ ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ತಿಳಿಸಿದರು.

ಅದಲ್ಲದೇ ಮಹಿಳೆ ಕೆಲ ಸಹಕಾರಿ ಸಂಸ್ಥೆಗಳಿಂದ ಸಾಲ ಪಡೆದಿದ್ದು, ಸಾಲ ಪಡೆದಿರುವ ಗುಂಪಿನ ಸದಸ್ಯರುಗಳು ಠಾಣೆಗೆ ಬಂದು ಸಂಧ್ಯಾರವರನ್ನು ಕಾಯುತ್ತಿದ್ದರು. ಮಹಿಳೆಯ ವಿಚಾರಣೆ ಮುಗಿದು ಹೊರಬರುವ ತನಕ ಕಾದ ಮಹಿಳಾ ಸದಸ್ಯರು 2 ಗಂಟೆಯ ಬಳಿಕ ಠಾಣೆಯಿಂದ ಹೊರ ಬಂದ ಮಹಿಳೆಯೊಂದಿಗೆ ಸಂಘದಿಂದ ಸಾಲ ಪಡೆದ ಹಣ ನೀಡುವ ಕುರಿತು ಮಾತಿನ ಚಕಮಕಿ ಕೂಡಾ ನಡೆಯಿತು.