Home News ಬಲವಂತವಾಗಿ ಹಿಂದೂಗಳ ಮತಾಂತರ ಮಾಡಿರುವ ಆರೋಪಿ ಪಾದ್ರಿಗೆ ಪೊಲೀಸ್ ಠಾಣೆಯಲ್ಲೇ ಬಿತ್ತು ಗೂಸಾ ! |...

ಬಲವಂತವಾಗಿ ಹಿಂದೂಗಳ ಮತಾಂತರ ಮಾಡಿರುವ ಆರೋಪಿ ಪಾದ್ರಿಗೆ ಪೊಲೀಸ್ ಠಾಣೆಯಲ್ಲೇ ಬಿತ್ತು ಗೂಸಾ ! | ತನ್ನನ್ನು ತಾನು ಸಮರ್ಥಿಸಿಕೊಂಡ ಆತನಿಗೆ ಚಪ್ಪಲಿಯಿಂದ ಯದ್ವಾತದ್ವಾ ಬಾರಿಸಿದ ಹಿಂದೂ ನಾಯಕರು

Hindu neighbor gifts plot of land

Hindu neighbour gifts land to Muslim journalist

ಬಲವಂತವಾಗಿ ಹಿಂದೂಗಳ ಮತಾಂತರ ಮಾಡಿರುವ ಆರೋಪದ ಮೇಲೆ ಕ್ರಿಶ್ಚಿಯನ್ ಪಾದ್ರಿಯೋರ್ವನನ್ನು ಪೊಲೀಸ್ ಠಾಣೆಯೊಳಗೇ ಹಿಂದೂ ಸಂಘಟನೆಯ ಕಾರ್ಯಕರ್ತರು ಯದ್ವಾ ತದ್ವಾ ಥಳಿಸಿರುವ ಘಟನೆ ಭೋಪಾಲ್‌ನ ರಾಯ್ಕುರದ ಪುರಾಣಿ ಬಸ್ತಿ ಠಾಣೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಚರ್ಚ್ ಪಾದ್ರಿ ಹಾಗೂ ದೂರುದಾರರ ಗುಂಪನ್ನು ಠಾಣೆಗೆ ವಿಚಾರಣೆಗಾಗಿ ಕರೆಸಲಾಗಿತ್ತು. ಈ ವೇಳೆ ತೀವ್ರ ವಾದ ವಿವಾದ ನಡೆದಿದ್ದು, ಕೋಪಗೊಂಡ ಗುಂಪು ಪಾದ್ರಿಯನ್ನು ಥಳಿಸಿದೆ.

ಭಟಗಾಂವ್ ಪ್ರದೇಶದಲ್ಲಿ ಬಲವಂತವಾಗಿ ಧಾರ್ಮಿಕ ಮತಾಂತರ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ದೂರುಗಳು ಬಂದಿದ್ದವು. ಕ್ರಿಶ್ಚಿಯನ್ ಸಮುದಾಯದ ಇತರ ಕೆಲವು ಸದಸ್ಯರೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿದ ಪಾದ್ರಿ ಜೊತೆ, ಹಿಂದೂ ಸಂಘಟನೆಯ ಮುಖಂಡರು ಬಿರುಸಿನ ಮಾತುಕತೆ ನಡೆಸಿದರು.

ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುತ್ತಿದ್ದಂತೆಯೇ ಕೆಲ ಹಿಂದೂ ನಾಯಕರು ಪಾದ್ರಿ ಮೇಲೆ ಹಲ್ಲೆ ನಡೆಸಿದ್ದಾರೆ. ಪಾದ್ರಿಗೆ ಚಪ್ಪಲಿ ಹಾಗೂ ಶೂಗಳಿಂದ ಹೊಡೆದಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದ್ದು, ಇತ್ತ ಹಲ್ಲೆ ಮಾಡಿದವರ ವಿರುದ್ಧವೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.