ಉಪ್ಪಿನಂಗಡಿ: ಹಿಂದೂ ಯುವಕನ ಮೀನಿನ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣ | ಆರೋಪಿಗಳ ಪತ್ತೆಗಾಗಿ ಹಿಂ.ಜಾ.ವೇ.ಯಿಂದ ಪೊಲೀಸ್ ಠಾಣೆಯ ಮುಂಭಾಗ ‘ಬೃಹತ್ ಧರಣಿ ಸತ್ಯಾಗ್ರಹ’

Share the Article

ಉಪ್ಪಿನಂಗಡಿ: ಹಳೆಗೇಟಿನಲ್ಲಿದ್ದ ಹಿಂದೂ ಕಾರ್ಯಕರ್ತನ ಮೀನಿನ ಅಂಗಡಿಗೆ ಕೆಲ ದಿನಗಳ ಹಿಂದೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದು, ಈ ಘಟನೆಯ ಆರೋಪಿಗಳನ್ನು ಇನ್ನೂ ಪತ್ತೆ ಹಚ್ಚದ ಕಾರಣ ನೈಜ ಆರೋಪಿಗಳನ್ನು ಘಟನೆ ನಡೆದು ಇಷ್ಟೂ ದಿನಗಳಾದರೂ ಬಂಧಿಸದ ಹಿನ್ನೆಲೆ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆl ಇಂದು ಉಪ್ಪಿನಂಗಡಿ ಠಾಣೆಯ ಮುಂಭಾಗ ಬೃಹತ್ ಧರಣಿ ಸತ್ಯಾಗ್ರಹ ನಡೆಸಿದರು.

ಪ್ರತಿಭಟನೆಯಲ್ಲಿ ಹಿಂದೂ ಮುಖಂಡರು ಹಾಗೂ ಹಲವಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಗಳಾಗಿದ್ದಾರೆ.

ಠಾಣೆಗೆ ತೆರಳುವ ದಾರಿ ಮಧ್ಯದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನಕಾರರನ್ನು ತಡೆದಿದ್ದು, ಪ್ರತಿಭಟನಕಾರರ ಒತ್ತಾಯಕ್ಕೆ ಮಣಿದು ಬ್ಯಾರಿಕೇಡ್ ಅನ್ನು ಸರಿಸಿ ಪೊಲೀಸ್ ಠಾಣೆಯ ಕಡೆಗೆ ತೆರಳಲು ಪ್ರತಿಭಟನಕಾರರಿಗೆ ಅವಕಾಶ ಕಲ್ಪಿಸಿದರು.

Leave A Reply

Your email address will not be published.