ಒಂದೇ ಕುಟುಂಬದ ಮೂವರು ನೇಣಿಗೆ ಶರಣು | ನಿಗೂಢವಾಗಿದೆ ಈ ಅಜ್ಜಿ, ಮಗಳು, ಮೊಮ್ಮಗಳ ಸಾವಿನ ಹಿಂದಿರುವ ಕಾರಣ !!

ಚಿಕ್ಕಮಗಳೂರು: ಒಂದೇ ಕುಟುಂಬದ ಮೂವರು ಅತ್ಮಹತ್ಯೆಗೆ ಶರಣಾಗಿರುವ ಘಟನೆ ಶೃಂಗೇರಿ ತಾಲೂಕಿನ ಮಕ್ಕಿಮನೆಯಲ್ಲಿ ನಡೆದಿದೆ.

 

ಅಜ್ಜಿ, ಮಗಳು, ಮೊಮ್ಮಗಳು ಮೂವರೂ ಆತ್ಮಹತ್ಯೆ ಮಾಡಿಕೊಂಡಿದ್ದು,ಶಾರದಮ್ಮ (70), ವೀಣಾ (40), ಶ್ರಾವ್ಯ (17)ಮೃತ ಪಟ್ಟವರೆಂದು ಗುರುತಿಸಲಾಗಿದೆ.ಇವರಲ್ಲಿ ವೀಣಾ ಎಂಬುವವರು ಅಂಗನವಾಡಿಯ ಶಿಕ್ಷಕಿಯಾಗಿದ್ದರು ಎಂದು ತಿಳಿದು ಬಂದಿದೆ.

ಈ ಮೂವರ ದೇಹ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ ಇವರ ಈ ನಿರ್ಧಾರಕ್ಕೆ ಏನು ಕಾರಣ? ಯಾಕೆ ಈ ಆತ್ಮಹತ್ಯೆ ಮಾಡಿಕೊಂಡರು ಎಂಬುದು ಇನ್ನೂ ಮಾಹಿತಿ ತಿಳಿದು ಬಂದಿಲ್ಲ.

ಈ ಘಟನೆ ಬಗ್ಗೆ ಶೃಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀನೆ ನಡೆಸಿ, ತನಿಖೆ ನಡೆಸಿದ್ದಾರೆ.

Leave A Reply

Your email address will not be published.