Home News ಬೆಂಗಳೂರು ಕಡಬ : ಶ್ರೀಗಂಧ ಮರಕಡಿಯಲು ಬಂದವರ ಮೇಲೆ ಅರಣ್ಯ ಇಲಾಖೆ ಫೈರಿಂಗ್ | ಮೂವರಿಗೆ ಗಾಯ

ಕಡಬ : ಶ್ರೀಗಂಧ ಮರಕಡಿಯಲು ಬಂದವರ ಮೇಲೆ ಅರಣ್ಯ ಇಲಾಖೆ ಫೈರಿಂಗ್ | ಮೂವರಿಗೆ ಗಾಯ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು : ಶ್ರೀಗಂಧದ ಮರ ಕಡಿಯಲು ಬಂದಿದ್ದವರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಹರದೇವನಗುಡ್ಡ ಎಂಬಲ್ಲಿಂದ ವರದಿಯಾಗಿದೆ.

ಕಡಬ ಹೋಬಳಿಯ ಹರದೇವನ ಗುಡ್ಡದಿಂದ ಶ್ರೀಗಂಧ ಕಡಿಯಲು ಬಂದಿದ್ದ ತಮಿಳುನಾಡಿನ ಕೃಷ್ಣಗಿರಿ ಮೂಲದ 3 ಜನರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಫೈರಿಂಗ್ ನಡೆಸಿದ್ದಾರೆ.

ಪರಿಣಾಮ ಕಾಲಿಗೆ ಗುಂಡು ತಾಗಿ ಅಲ್ಲಿಂದ ಓಡಿ ತಪ್ಪಿಸಿಕೊಂಡು ಹೋಗಲಾರದೇ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದರು.

ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಅವರನ್ನು ಸುಲಭವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.ಮಚ್ಚು ಸೇರಿದಂತೆ ಶ್ರೀಗಂಧ ಮರ ಕಡಿಯಲು ಬೇಕಾದಂತಹ ಉಪಕರಣಗಳೊಂದಿಗೆ ಬಂದಿದ್ದ ಮರಗಳ್ಳರಿಗೆ ಶರಣಾಗುವಂತೆ ಸೂಚಿಸಿದ್ದಾರೆ ಆದರೆ ಅವರ ಸೂಚನೆ ದಿಕ್ಕರಿಸಿದ್ದಾರೆ. ದಾಳಿ ನಡೆಸುವ ಸಾಧ್ಯತೆಗಳಿಂದ ಅರಣ್ಯ ಇಲಾಖೆಯವರು ಕಾಲಿಗೆ ಗುಂಡು ಹಾರಿಸಿದ್ದಾರೆ.

ಗಾಯಗೊಂಡವರನ್ನು ತುಮಕೂರು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.