Home News ಅಫ್ಘಾನಿಸ್ತಾನದಲ್ಲಿ ಮಿತಿಮೀರಿದ ತಾಲಿಬಾನಿಗಳ ಅಟ್ಟಹಾಸ!! ತುಂಬು ಗರ್ಭಿಣಿ ಪೊಲೀಸ್ ಅಧಿಕಾರಿಯೊಬ್ಬರನ್ನು ಪತಿ, ಮಕ್ಕಳ ಮುಂದೆಯೇ ಗುಂಡಿಕ್ಕಿ...

ಅಫ್ಘಾನಿಸ್ತಾನದಲ್ಲಿ ಮಿತಿಮೀರಿದ ತಾಲಿಬಾನಿಗಳ ಅಟ್ಟಹಾಸ!! ತುಂಬು ಗರ್ಭಿಣಿ ಪೊಲೀಸ್ ಅಧಿಕಾರಿಯೊಬ್ಬರನ್ನು ಪತಿ, ಮಕ್ಕಳ ಮುಂದೆಯೇ ಗುಂಡಿಕ್ಕಿ ಕೊಂದು ಖುಷಿ ಕಂಡರು ಪಾಪಿಗಳು

Hindu neighbor gifts plot of land

Hindu neighbour gifts land to Muslim journalist

ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು ಪ್ರತಿನಿತ್ಯ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದಾರೆ. ಮಹಿಳೆಯರನ್ನಂತೂ ಕಾಲಿನ ಕಸದಂತೆ ನೋಡುತ್ತಿದ್ದಾರೆ. ಇದು ಮುಂದುವರೆದಿದ್ದು, ಅಫ್ಘಾನ್‌ನ ಗರ್ಭಿಣಿ ಮಹಿಳಾ ಪೊಲೀಸ್ ಅಧಿಕಾರಿಯನ್ನು ಆಕೆಯ ಗಂಡ, ಮಕ್ಕಳ ಮುಂದೆಯೇ ಗುಂಡಿಟ್ಟು ಕೊಂದು ಮುಖವನ್ನು ವಿರೂಪಗೊಳಿಸಿ ವಿಕೃತಿ ಮೆರೆದಿದ್ದಾರೆಂದು ವರದಿಯಾಗಿದೆ.

ಅಫ್ಘಾನ್‌ನ ಘೋರ್ ಪ್ರಾಂತ್ಯದ ಕೇಂದ್ರ ನಗರದ ಫಿರೋಜ್ಯೋಪ್‌ನಲ್ಲಿ ಈ ಘನ ಘೋರ ಕೃತ್ಯ ನಡೆದಿದೆ. ಹತ್ಯೆಗೀಡಾದ ಮಹಿಳಾ ಅಧಿಕಾರಿಯನ್ನು ಬಾನು ನೆಗರ್ ಎಂದು ಗುರುತಿಸಲಾಗಿದೆ. ತಾಲಿಬಾನಿಗಳ ಹಲ್ಲೆಯಿಂದ ಆಕೆಯ ಮುಖ ತುಂಬಾ ವಿರೂಪಗೊಂಡಿದೆ. ಸ್ಥಳೀಯ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ನೆಗರ್ 8 ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದುಬಂದಿದೆ.

ತಮ್ಮ ವಿರುದ್ಧ ಅಮೆರಿಕ ಸೇನೆಗೆ ಸಹಾಯ ಮಾಡಿದವರ ಮನೆ ಬಾಗಿಲಿಗೆ ಹೋಗಿ ಹುಡುಕಿ ಹುಡುಕಿ ಮರಣದಂಡನೆ ನೀಡುತ್ತಿರುವ ತಾಲಿಬಾನಿಗಳು, ಮಹಿಳಾ ಪೊಲೀಸ್ ಅಧಿಕಾರಿ ನೆಗರ್‌ನನ್ನು ಅವರ ಗಂಡ ಮತ್ತು ಮಕ್ಕಳ ಮುಂದೆಯೇ ಕೊಲೆ ಮಾಡಿದ್ದಾರೆ. ಅಲ್ಲಿನ ಸ್ಥಳೀಯ ತಾಲಿಬಾನ್ ಈ ಘಟನೆಯನ್ನು ತನಿಖೆ ನಡೆಸುವ ಭರವಸೆ ನೀಡಿದೆ ಎಂದು ಕುಟುಂಬ ಹೇಳಿದೆ.

ಅಫ್ಘಾನಿಸ್ತಾನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಾಗಿನಿಂದ ತಾಲಿಬಾನ್‌ಗಳು ತಮ್ಮನ್ನು ತಾವು ತಿಳಿದಿರುವುದಕ್ಕಿಂತ ಹೆಚ್ಚು ಸಹಿಷ್ಣು ಮತ್ತು ಉದಾರವಾದಿಗಳೆಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಹಾಗಿದ್ದೂ ಕಾಬುಲ್‌ನಲ್ಲಿ ಉಗ್ರರ ಗುಂಪು ಪುನರುತ್ಥಾನಗೊಂಡ ದೇಶದಲ್ಲಿ ಕ್ರೌರ್ಯ ಮತ್ತು ದಮನದ ನೀತಿಯನ್ನು ಅನುಸರಿಸಿದ್ದು, ರಕ್ತಪಿಪಾಸುಗಳಂತೆ ತಮ್ಮ ವಿರೋಧಿಗಳ ಮಾರಣಹೋಮ ಮಾಡುತ್ತಿರುವುದಲ್ಲದೆ, ಅಮಾಯಕರನ್ನು ಬಲಿ ಕೊಡುತ್ತಿದ್ದಾರೆ.