ಅಪಘಾತದ ಗಾಯಾಳು ನರಿಕೊಂಬು ಪಿಡಿಓ ನಿಧನ

Share the Article

ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾ.ಪಂ. ನಲ್ಲಿ ಪಿಡಿಓ ಅಗಿದ್ದ ಶಿವು ಜನಕುಂಡ ಅವರು ಶುಕ್ರವಾರ ನಿಧನ ಹೊಂದಿದರು.

ಕೆಲ ದಿನಗಳ ಹಿಂದೆ ರಸ್ತೆ ಅಪಘಾತದಿಂದ ಗಾಯಗಳಾಗಿದ್ದು, ಎರಡು ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನಹೊಂದಿದರು.
ಮೂಲತಃ ಅಥಣಿಯವರಾಗಿದ್ದ ಅವರು ನರಿಕೊಂಬು ಪಿಡಿಓ ಆಗಿ ನೇಮಕವಾದ ಬಳಿಕ ಬಿ.ಸಿ. ರೋಡಿನ ಕೈಕುಂಜೆ ಎಂಬಲ್ಲಿ ವಾಸವಾಗಿದ್ದರು.

Leave A Reply