ಎರಡೂ ಡೋಸ್ ವ್ಯಾಕ್ಸಿನೇಷನ್ ಆದವರಿಗೆ ಮಾತ್ರ ಮದ್ಯ
ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ಸರ್ಕಾರಿ ಮಳಿಗೆಯಲ್ಲಿ ಮದ್ಯ ಖರೀದಿಗೆ ಅನುಮತಿ ಇರಲಿದೆ ಎಂದು ತಮಿಳುನಾಡು ರಾಜ್ಯದ ನೀಲಗಿರಿ ಜಿಲ್ಲೆಯ ಜಿಲ್ಲಾಧಿಕಾರಿ ದಿವ್ಯಾ ಅವರು ಆದೇಶ ಹೊರಡಿಸಿದ್ದಾರೆ.
ಲಸಿಕೆ ಕುರಿತು ಜಾಗೃತಿ ಮೂಡಿಸಿದರೂ ಕೆಲವು ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ನೀಲಗಿರಿ ಜಿಲ್ಲೆಯಲ್ಲಂತೂ ಜಿಲ್ಲಾಡಳಿತ ಎಷ್ಟೇ ಕಸರತ್ತು ನಡೆಸಿದರೂ ಕೆಲವರು ಲಸಿಕೆ ಪಡೆಯದಿರಲು ಕುಂಟು ನೆಪ ಹೇಳುತ್ತಿದ್ದಾರಂತೆ. ಅದರಲ್ಲೂ ಕುಡುಕರು ನಾನು ಮದ್ಯ ಪಾನ ಮಾಡಿದ್ದೇನೆ ,ಸದ್ಯಕ್ಕೆ ನಂಗೆ ಲಸಿಕೆ ಬೇಡ ಎಂದು ಹೇಳುತ್ತಿದ್ದು,ಈ ಮದ್ಯ ಪ್ರಿಯರ ಮಾತು ಜಿಲ್ಲಾಧಿಕಾರಿಗಳವರೆಗೂ ಮುಟ್ಟಿದೆ.
ಇದಕ್ಕಾಗಿ ಜಿಲ್ಲಾಧಿಕಾರಿಯವರು ಜಿಲ್ಲಾದ್ಯಂತ ಈ ರೀತಿಯ ಹೊಸ ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಮಳಿಗೆಗಲ್ಲಿ ಮದ್ಯ ಖರೀದಿಸಬೇಕಾದರೆ ಕೋವಿಡ್ ಎರಡೂ ಡೋಸ್ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ತೋರಿಸುವುದು ಕಡ್ಡಾಯ. ಸರ್ಟಿಫಿಕೇಟ್ ತೋರಿಸಿದವರಿಗೆ ಮಾತ್ರ ಸರಾಯಿ ನೀಡುವಂತೆ ಜಿಲ್ಲಾಧಿಕಾರಿ ದಿವ್ಯಾ ಅವರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.