Home latest ಎರಡು ತಿಂಗಳ ಬಳಿಕ ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ | ಇದನ್ನು ನಿರ್ಲಕ್ಷಿಸಿದರೆ...

ಎರಡು ತಿಂಗಳ ಬಳಿಕ ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ | ಇದನ್ನು ನಿರ್ಲಕ್ಷಿಸಿದರೆ ಅಪಾಯ ಖಂಡಿತ!!

Hindu neighbor gifts plot of land

Hindu neighbour gifts land to Muslim journalist

ದೇಶದಲ್ಲಿ ಕೊರೋನ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇದೀಗ ಎರಡು ತಿಂಗಳಲ್ಲಿ ಕೋವಿಡ್ 19 ಪ್ರಕರಣಕ್ಕೆ ತುತ್ತಾಗಿ ಮೃತ ಆಗಿರುವವರ ಸಂಖ್ಯೆ ಭಾರೀ ಏರಿಕೆ ಕಂಡಿದೆ.

ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆಯನ್ನು ನೀಡುತ್ತಿದ್ದು,ಇಂದು ಶೇ.12 ರಷ್ಟು ಪ್ರಕರಣಗಳು ನಿನ್ನೆಗೆ ಹೋಲಿಸಿದರೆ ಹೆಚ್ಚಾಗಿದೆ ಎಂದಿದ್ದಾರೆ.ಕಳೆದ 24 ಗಂಟೆಯಲ್ಲಿ 47,092 ಮಂದಿಗೆ ಕೊರೊನಾ ಬಂದಿದ್ದು,ಈ ಪೈಕಿ 509 ಮಂದಿ ಮೃತಪಟ್ಟಿದ್ದಾರೆ ಎಂದು ಇಲಾಖೆ ಹೇಳಿದೆ.

ದಿನದ ಪ್ರಕರಣಗಳ ಪೈಕಿ ಕೇರಳದಲ್ಲಿ 32,083 ಪಾಸಿಟಿವ್ ಬಂದಿದ್ದು 173 ಮಂದಿ ಮೃತಪಟ್ಟಿದ್ದಾರೆ. ಕೇರಳದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.18.76 ಇದ್ದು, ಇಲ್ಲಿಯವರೆಗೆ ಒಟ್ಟು 40,90,036 ಮಂದಿಗೆ ಸೋಂಕು ಬಂದಿದೆ. ಮಹಾರಾಷ್ಟ್ರದಲ್ಲಿ 4,456 ಮಂದಿಗೆ ಕೊರೊನಾ ಬಂದಿದ್ದರೆ 183 ಮಂದಿ ಮೃತಪಟ್ಟಿದ್ದಾರೆ.

ಈ ತಿಂಗಳ 15ರ ಒಳಗಾಗಿ ಸೋಂಕಿನ ತೀವ್ರತೆ ತಗ್ಗಿಸಬೇಕೆಂದಿದ್ದರೆ, ಕಠಿಣ ಲಾಕ್‍ಡೌನ್ ನಿಯಮಗಳನ್ನು ಜಾರಿ ಮಾಡಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕೇರಳ ಸರ್ಕಾರಕ್ಕೆ ಬುಧವಾರ ಸೂಚಿಸಿದೆ.

ವ್ಯೂಹಾತ್ಮಕ ಮತ್ತು ಕೌಶಲ್ಯಯುಕ್ತವಾಗಿ ಸೋಂಕು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಹಿಂದಿನ ಸಂದರ್ಭಗಳಲ್ಲಿ ರಾಜ್ಯ ಸರ್ಕಾರಕ್ಕೆ ಸೂಚಿಸಿದ ನಿಯಮಗಳ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳು ಸಾಲದು ಎಂದು ಕೇಂದ್ರ ಸರ್ಕಾರ, ಎಲ್‍ಡಿಎಫ್ ಸರ್ಕಾರಕ್ಕೆ ಅತೃಪ್ತಿಯನ್ನು ಸ್ಪಷ್ಟ ಮಾತುಗಳಲ್ಲಿ ಹೇಳಿದೆ.

ಮೈಕ್ರೋ ಕಂಟೈನ್‍ಮೆಂಟ್ ವಲಯಗಳ ರಚನೆ, ಕಟ್ಟುನಿಟ್ಟಾಗಿ ಸೋಂಕು ಪ್ರತಿಬಂಧಕ ನಿಯಮಗಳ ಪಾಲನೆ, ರಾತ್ರಿ ಕಫ್ರ್ಯೂ ಜಾರಿಯ ಬಗ್ಗೆ ಕ್ರಮಗಳನ್ನು ಕೈಗೊಳ್ಳಬೇಕು.

ಇತ್ತೀಚಿನ ಉತ್ಸವಗಳಿಗೆ ನಿಯಮ ಸಡಿಲಿಕೆ ಮಾಡಿದ್ದೂ, ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಶೀಘ್ರದಲ್ಲಿಯೇ ಕಟ್ಟುನಿಟ್ಟಿನ ಲಾಕ್‍ಡೌನ್ ಜಾರಿ ಮಾಡಿದರೆ, ಸೆ.15ರ ಒಳಗಾಗಿ ಕೊರೊನಾ ಪ್ರಮಾಣ ತಗ್ಗಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಶೇ.85ಮಂದಿ ರಾಜ್ಯದಲ್ಲಿ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ರಾಜ್ಯದಲ್ಲಿ ಜುಲೈ- ಆಗಸ್ಟ್ ನಲ್ಲಿ ಸರಾಸರಿ 13,500 – 19,500 ದಿನವಹಿ ಸೋಂಕುಗಳು ದೃಢಪಡುತ್ತಿದ್ದವು.