ಸವಣೂರು : ನಡುಮನೆ ವಸಂತ ರೈ ನಿಧನ

ಸವಣೂರು: ಪುಣ್ಚಪ್ಪಾಡಿ ಗ್ರಾಮದ ನಡುಮನೆ ವಸಂತ ರೈ ಅವರು ಸೆ.2ರಂದು ನಿಧನರಾದರು.

ಸವಣೂರಿನ ಹಿರಿಯ ವರ್ತಕ ಎನ್.ಸುಂದರ ರೈ ಅವರ ಸಹೋದರರಾಗಿರುವ ವಸಂತ ರೈ ಅವರು ಸವಣೂರಿನಲ್ಲಿ ದಿನಸಿ ಅಂಗಡಿ,ಅರುಣಾ ಕ್ಲೋತ್ ಸೆಂಟರ್,ಫ್ಯಾನ್ಸಿ ವ್ಯವಹಾರವನ್ನು ಸಹೋದರರ ಜತೆ ನಡೆಸುತ್ತಿದ್ದರು.

ಮೃತರ ಅಂತ್ಯಕ್ರಿಯೆಯು ಸಂಜೆ 4ಕ್ಕೆ ಪುಣ್ಚಪ್ಪಾಡಿ ನಡುಮನೆಯ ಬಳಿ ನೆರವೇರಲಿದೆ.

Leave A Reply

Your email address will not be published.