Home News ಸಾರ್ವಜನಿಕ ಬಸ್ ಸ್ಟಾಂಡ್ ನ್ನು ಹೊತ್ತುಕೊಂಡು ಹೋದ ಕಳ್ಳರು !! ಬಿಬಿಎಂಪಿ ವತಿಯಿಂದ ನಿರ್ಮಿಸಲಾಗಿದ್ದ...

ಸಾರ್ವಜನಿಕ ಬಸ್ ಸ್ಟಾಂಡ್ ನ್ನು ಹೊತ್ತುಕೊಂಡು ಹೋದ ಕಳ್ಳರು !! ಬಿಬಿಎಂಪಿ ವತಿಯಿಂದ ನಿರ್ಮಿಸಲಾಗಿದ್ದ ಕಬ್ಬಿಣದ ಬಸ್ ಸ್ಟಾಂಡ್ ಕಳ್ಳರ ಪಾಲು

Hindu neighbor gifts plot of land

Hindu neighbour gifts land to Muslim journalist

ಬಸ್ ಸ್ಟಾಂಡ್ ನ್ನೇ ಕಳ್ಳರು ಹೊತ್ತುಕೊಂಡು ಹೋದ ಘಟನೆಯೊಂದು ಬೆಂಗಳೂರಿನಿಂದ ವರದಿಯಾಗಿದ್ದು, ಎಲ್ಲರೂ ಅಚ್ಚರಿಪಡುವಂತಹ ಈ ಘಟನೆ ರಾಜ್ಯದಲ್ಲೇ ಮೊದಲ ಪ್ರಕರಣವಾಗಿದೆ.

ಘಟನೆ ವಿವರ:ಬಿಬಿಎಂಪಿ ವತಿಯಿಂದ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಕಬ್ಬಿಣದಿಂದ ಬಸ್ಸು ಸ್ಟಾಂಡ್ ಒಂದನ್ನು ನಿರ್ಮಿಸಿದ್ದು,ಸದ್ಯ ಕಬ್ಬಿಣದಿಂದ ನಿಮಿಸಿದ ಬಸ್ ಸ್ಟಾಂಡನ್ನು ಕಳ್ಳರು ತಡರಾತ್ರಿ ಕಟರ್ ಮೂಲಕ ಕಟ್ ಮಾಡಿ ಕಳ್ಳತನ ಮಾಡಿರುವ ಬಗ್ಗೆ ವರದಿಯಾಗಿದ್ದು, ಕೆ ಆರ್ ಪುರಂ ನ ಆನಂದಪುರ ಟಿಸಿ ಪಾಳ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಘಟನೆ ಬಗ್ಗೆ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಶೀಘ್ರ ಆರೋಪಿಗಳ ಬಂಧನಕ್ಕೆ ಆಗ್ರಹಿಸಲಾಗಿದೆ.