Home News ಕಡಬ : ಅಕ್ರಮ ಸಕ್ರಮ ಅರಣ್ಯದಂಚಿನ ಭೂಮಿ ಸಕ್ರಮೀಕರಣಕ್ಕೆ ಅರಣ್ಯ ಇಲಾಖೆಯಿಂದ ಆಕ್ಷೇಪಣೆ | ಸಮಸ್ಯೆ...

ಕಡಬ : ಅಕ್ರಮ ಸಕ್ರಮ ಅರಣ್ಯದಂಚಿನ ಭೂಮಿ ಸಕ್ರಮೀಕರಣಕ್ಕೆ ಅರಣ್ಯ ಇಲಾಖೆಯಿಂದ ಆಕ್ಷೇಪಣೆ | ಸಮಸ್ಯೆ ನಿವಾರಿಸಲು ಮಲೆನಾಡು ಜನಹಿತರಕ್ಷಣಾ ವೇದಿಕೆಯಿಂದ ಸಚಿವರಿಗೆ ಮನವಿ

Hindu neighbor gifts plot of land

Hindu neighbour gifts land to Muslim journalist

ಕಡಬ: ಕಡಬ ತಾಲೂಕಿನ ಅರಣ್ಯದಂಚಿನಲ್ಲಿ ವಾಸಿಸುವ ಮಂದಿಗೆ 94 ಸಿ,ಅಕ್ರಮ ಸಕ್ರಮ ದಲ್ಲಿ ಭೂಮಿ ಮಂಜೂರಾತಿಗೆ ಅರಣ್ಯ ಇಲಾಖೆಯಿಂದ ಅಕ್ಷೇಪಣೆ ಸಲ್ಲಿಕೆಯಾಗುತ್ತಿದ್ದು , ಇಂತಹ ಸಮಸ್ಯೆನ್ನು ನಿವಾರಿಸಲು ಕಡಬದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಅವರಿಗೆ ಮಲೆನಾಡು ಜನಹಿತರಕ್ಷಣಾ ವೇದಿಕೆ ವತಿಯಿಂದ ಕಡಬದಲ್ಲಿ ಮನವಿ ನೀಡಲಾಯಿತು.

ಐತ್ತೂರು ಗ್ರಾಮ ಪಂಚಾಯಿತಿ ಸದಸ್ಯ, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಕಡಬ ತಾಲೂಕು ಸಂಚಾಲಕ ಈರೇಶ್ ಗೌಡ ನೇತೃತ್ವದಲ್ಲಿ ಮನವಿ ನೀಡಲಾಯಿತು. ಮನವಿ ಸ್ವೀಕರಿಸಿ ಸ್ಪಂದಿಸಿದ ಸಚಿವರು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಯನ್ನು ಸಂಪರ್ಕಿಸಿ ತಕ್ಷಣ ಜಂಟಿ ಸರ್ವೆಗೆ ಅದೇಶಿಸಿದರು.

ಈ ಸಂದರ್ಭ ಮರ್ದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ಕೊಡಂದೂರು, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಮುಖಂಡ ಕುರಿವಿಲ್ಲ ಕರ್ಮಾಯಿ ಉಪಸ್ಥಿತರಿದ್ದರು.