ಗಂಡ ಮಾಡಿದ ಸಾಲಕ್ಕೆ ಹೆಂಡತಿಯನ್ನೇ ಒತ್ತೆಯಾಳಗಿಟ್ಟುಕ್ಕೊಂಡ ಫೈನಾನ್ಸರ್ | ಮೂತ್ರ ವಿಸರ್ಜನೆಗೂ ಬಿಡದೇ ಕೂಡಿ ಹಾಕಿ ಚಿತ್ರಹಿಂಸೆ !

Share the Article

ಯಾದಗಿರಿ:ಸಾಲಗಾರರ ಕಾಟ ಅಂತೂ ಕಟ್ಟಿಟ್ಟ ಬುತ್ತಿ. ಇತ್ತೀಚಿಗೆ ಅಂತೂ ಸಾಲ ಕೇಳುವವರ ಸಂಖ್ಯೆಯು ಹೆಚ್ಚಾಗಿದ್ದು,ನಂತರ ಪಾವತಿಸದೆ ಕೊಲೆ ದರೋಡೆ ಮಾಡಿದ್ದು ಉಂಟು. ಅದರಲ್ಲೂ ಯಾದಗಿರಿ ನಗರದಲ್ಲಿ ನಡೆದ ಘಟನೆ ಆಶ್ಚರ್ಯಕರವಾಗಿದೆ.

ಖಾಸಗಿ ಫೈನಾನ್ಸ್ ವೊಂದು ಗಂಡ ಮಾಡಿದ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಾಗಿರಿಸಿದ ಘಟನೆ ಯಾದಗಿರಿಯ ಅಜೀಜ್ ಕಾಲೋನಿಯಲ್ಲಿ ನಡೆದಿದೆ.

ಶಿವಶಂಕರ್ ಫೈನಾನ್ಸ್‌ನಲ್ಲಿ ಮಹ್ಮದ್ ಮೂರು ಲಕ್ಷ ಸಾಲ ಪಡೆದಿದ್ದರು. ಸಮಯಕ್ಕೆ ಸರಿಯಾಗಿ ಅಸಲು ಮತ್ತು ಬಡ್ಡಿ ಕಟ್ಟಿದ್ದರು. ಹೀಗಿದ್ದರೂ ಫೈನಾನ್ಸ್‌ನಿಂದ ಹೆಚ್ಚಿನ ಬಡ್ಡಿ ನೀಡಲು ಒತ್ತಾಯ ಮಾಡಿತ್ತು. ಇದಕ್ಕೆ ಮಹ್ಮದ್ ಒಪ್ಪಿರಲಿಲ್ಲ. ಇದರಿಂದಾಗಿ ಫೈನಾನ್ಸ್ ಕಡೆಯವರು ಕಿರುಕುಳ ನೀಡುತಿದ್ದರು.

ಇದೇ ವಿಚಾರವಾಗಿ ಆತನ ಹೆಂಡತಿ ರಿಜ್ವಾನರನ್ನು ಫೈನಾನ್ಸ್ ಮಾಲೀಕರು ಆಫೀಸ್​ಗೆ ಕರೆದುಕೊಂಡು ಹೋಗಿ ಒತ್ತೆಯಾಳಾಗಿಸಿಕೊಂದಿದ್ದಾರೆ.ಆಕೆಗೆ ಮೂತ್ರ ವಿಸರ್ಜನೆಗೂ ಬಿಡದೇ ಚಿತ್ರ ಹಿಂಸೆ ನೀಡಿದ್ದಾರೆ.

ಫೈನಾನ್ಸ್ ನಡೆಸುವ ಶಿವಶಂಕರ್, ಚಂದ್ರಕಲಾ, ಶಿವಮ್ಮ, ಪಾರ್ವತಿ ಎಂಬವರಿಂದ ಈ ಕೃತ್ಯ ನಡೆದಿದ್ದು,ಫೈನಾನ್ಸ್‌ನವರ ಕಿರುಕುಳವನ್ನು ರಿಜ್ವಾನ್‍ರವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.
ಈ ವಿಚಾರವಾಗಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply