ಗ್ರಾಹಕರಿಗೆ ಶಾಕ್ ಕೊಟ್ಟ ಮಾರುತಿ ಸುಜುಕಿ | ಸೆಪ್ಟೆಂಬರ್ ತಿಂಗಳಿಂದ ಏರಿಕೆಯಾಗಲಿದೆ ಸುಜುಕಿಯ ವಿವಿಧ ಮಾಡೆಲ್ ಕಾರುಗಳ ಬೆಲೆ !!
ಸೆಪ್ಟೆಂಬರ್ ತಿಂಗಳಿಂದ ತನ್ನ ವಿವಿಧ ಮಾಡೆಲ್ ಕಾರುಗಳ ಬೆಲೆಗಳನ್ನು ಏರಿಸುವುದಾಗಿ ಮಾರುತಿ ಸುಜುಕಿ ಇಂಡಿಯಾ ಕಂಪೆನಿಯು ತಿಳಿಸಿದ್ದು, ಹಲವು ಇನ್ ಪುಟ್ ಕಾಸ್ಟ್‌ಗಳ ಹೆಚ್ಚಳವಾಗಿರುವ ಕಾರಣದಿಂದ ಕಂಪೆನಿ ಈ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ವರದಿಯಾಗಿದೆ.
ಯಾವ ಮಾದರಿ ಕಾರಿನ ಮೇಲೆ ಎಷ್ಟು ಏರಿಕೆಯಾಗುತ್ತದೆ ಎಂದು ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಬಗ್ಗೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಜೂನ್ ತಿಂಗಳಲ್ಲಿ ಸಲ್ಲಿಸಿದ ಹೇಳಿಕೆಯಲ್ಲೂ ಕಂಪೆನಿ ಈ ಬಗ್ಗೆ ಸುಳಿವು ನೀಡಿತ್ತು.
“ಕಳೆದ ವರ್ಷದಲ್ಲಿ ವಿವಿಧ ಇನ್‌ಪುಟ್ ಕಾಸ್ಟ್ ಗಳ ಹೆಚ್ಚಳವು ಕಂಪೆನಿಯ ವಾಹನಗಳ ತಯಾರಿಕಾ ವೆಚ್ಚದ ಮೇಲೆ ವಿಪರೀತ ಪ್ರಭಾವ ಬೀರಿದೆ. ಹೀಗಾಗಿ ಈ ಹೆಚ್ಚುವರಿ ವೆಚ್ಚದ ಸ್ವಲ್ಪ ಪ್ರಮಾಣವನ್ನು ಬೆಲೆ ಏರಿಕೆಯ ಮೂಲಕ ಗ್ರಾಹಕರಿಗೆ ವರ್ಗಾಯಿಸುವುದು ಅವಶ್ಯಕವಾಗಿದೆ. ಎಲ್ಲಾ ಮಾಡೆಲ್‌ಗಳ ಯಾವ ಯಾವಮೇಲೆ ಸೆಪ್ಟೆಂಬರ್ 2021 ರಿಂದ ಬೆಲೆ ಏರಿಸಲು ಯೋಜಿಸಲಾಗಿದೆ” ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ ಎನ್ನಲಾಗಿದೆ.
ಈಗಾಗಲೇ ಪೆಟ್ರೋಲ್ ಬೆಲೆ ಹೆಚ್ಚಾಗಿರುವುದರಿಂದ ಮುಂದೆ ಕಾರು ಖರೀದಿಸಲು ಗ್ರಾಹಕರು ತುಂಬಾ ಯೋಚನೆ ಮಾಡುವ ಸಂದರ್ಭ ಎದುರಾಗಿದೆ. ಯಾವ ಮಾದರಿಯ ಕಾರಿನ ಬೆಲೆ ಎಷ್ಟು ಹೆಚ್ಚಾಗಲಿದೆ ಎಂಬುದನ್ನು ಇನ್ನು ಕಾದು ನೋಡಬೇಕಾಗಿದೆ.