Home News ಮನೆಯವರೆಲ್ಲ ಒಟ್ಟಿಗೆ ಕುಳಿತು ಊಟ ಮಾಡುತ್ತಿರುವಾಗ ಏಕಾಏಕಿ ಕೆಳಗೆ ಬಿದ್ದ ಫ್ಯಾನ್ | ಗ್ರೇಟ್ ಎಸ್ಕೇಪ್...

ಮನೆಯವರೆಲ್ಲ ಒಟ್ಟಿಗೆ ಕುಳಿತು ಊಟ ಮಾಡುತ್ತಿರುವಾಗ ಏಕಾಏಕಿ ಕೆಳಗೆ ಬಿದ್ದ ಫ್ಯಾನ್ | ಗ್ರೇಟ್ ಎಸ್ಕೇಪ್ ಆದ ಫ್ಯಾಮಿಲಿ, ವಿಡಿಯೋ ಈಗ ಸಖತ್ ವೈರಲ್ !!

Hindu neighbor gifts plot of land

Hindu neighbour gifts land to Muslim journalist

ಈಗಿನ ಕಾಲದಲ್ಲಿ ಮನೆಯಲ್ಲಿ ಎಲ್ಲರೂ ಜೊತೆಗೆ ಕುಳಿತು ಊಟ ಮಾಡುವುದು ಕಾಣ ಸಿಗುವುದು ಬಹಳ ಅಪರೂಪವೇ ಆಗಿಬಿಟ್ಟಿದೆ. ಆದರೆ ಇಲ್ಲೊಂದು ಕುಟುಂಬದಲ್ಲಿ ಎಲ್ಲರೂ ಖುಷಿಯಿಂದ ಜೊತೆಯಾಗಿ ಊಟ ಮಾಡುತ್ತಿರುವಾಗ ಅನಾಹುತವೊಂದು ಸಂಭವಿಸಿದ್ದು, ಎಲ್ಲರೂ ಅದೃಷ್ಟವಶಾತ್ ಆಗಿ ಪಾರಾಗಿದ್ದಾರೆ.

ಎಲ್ಲರೂ ಹಾಲ್ ನಲ್ಲಿ ನೆಮ್ಮದಿಯಾಗಿ ಕುಳಿತುಕೊಂಡು ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಫ್ಯಾನ್ ಕೆಳಗೆ ಬಿದ್ದಿದ್ದು, ಮನೆ ಮಂದಿ ಭಾರೀ ಅವಘಡದಿಂದ ಪಾರಾಗಿದ್ದಾರೆ.

ಈ ಘಟನೆ ಎಲ್ಲಿ ನಡೆದಿದೆ ಎಂಬುದು ವರದಿಯಾಗಿಲ್ಲ. ಆದರೆ ಫ್ಯಾನ್ ಬೀಳುವ ವೀಡಿಯೋ ಮಾತ್ರ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಡಿಯೋ ತುಣುಕು

1 ಸೆಕೆಂಡ್ ಇರುವ ಈ ವೀಡಿಯೋದಲ್ಲಿ ವಿಯೇಟ್ನಾಂ ಮೂಲದ ಕುಟುಂಬವೊಂದು ಒಟ್ಟಾಗಿ ಕುಳಿತು ಊಟ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಪತಿ, ಪತ್ನಿ ಹಾಗೂ ತಮ್ಮ ಮಕ್ಕಳು ಮಾತನಾಡುತ್ತಾ ಊಟ ಮಾಡುತ್ತಿದ್ದಾಗ ಫ್ಯಾನ್ ಏಕಾಏಕಿ ಪತಿ ಹಾಗೂ ಮಗುವಿನ ಮೇಲೆ ಬೀಳುತ್ತದೆ. ಇದರಿಂದ ಇಡೀ ಕುಟುಂಬ ಗಾಬರಿಗೊಳಗಾಗುತ್ತದೆ. ಅಲ್ಲದೆ ಮಹಿಳೆ ಕೂಡಲೇ ಎದ್ದು ಮಗನ ಎಳೆದುಕೊಂಡು ಕೈ, ತಲೆ ಉಜ್ಜುತ್ತಾರೆ. ಇತ್ತ ವ್ಯಕ್ತಿ ಬಿದ್ದ ಫ್ಯಾನ್ ಅನ್ನು ಪಕ್ಕದಲ್ಲಿ ಇಡುತ್ತಾರೆ. ಆದರೆ ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ.

ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಹಲವಾರು ಕಾಮೆಂಟ್ ಗಳು ಬರುತ್ತಿದೆ. ಹಲವರು ಗ್ರೇಟ್ ಎಸ್ಕೇಪ್ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಅದೃಷ್ಟವಂತ ಫ್ಯಾಮಿಲಿ ಎಂದಿದ್ದಾರೆ. ಒಟ್ಟಿನಲ್ಲಿ ಯಾವುದೇ ಅಪಾಯವಿಲ್ಲದೆ ಪಾರಾದ ಕುಟುಂಬ ನೋಡಿ ಜನ ಸಂತಸಪಟ್ಟಿದ್ದಾರೆ.