Home News ಮಂಗಳೂರು | ತಲಪಾಡಿ ಚೆಕ್ ಪೋಸ್ಟ್ ಮೂಲಕ ನಕಲಿ ಆರ್ ಟಿಪಿಸಿಆರ್ ವರದಿ ಹಿಡಿದು ರಾಜ್ಯ...

ಮಂಗಳೂರು | ತಲಪಾಡಿ ಚೆಕ್ ಪೋಸ್ಟ್ ಮೂಲಕ ನಕಲಿ ಆರ್ ಟಿಪಿಸಿಆರ್ ವರದಿ ಹಿಡಿದು ರಾಜ್ಯ ಪ್ರವೇಶಿಸಿದ ಕಾಸರಗೋಡಿನ ನಾಲ್ವರ ಬಂಧನ

Hindu neighbor gifts plot of land

Hindu neighbour gifts land to Muslim journalist

ಕೇರಳದಿಂದ ಕರ್ನಾಟಕಕ್ಕೆ ನಕಲಿ ಆರ್ ಟಿಪಿಸಿಆರ್ ಸರ್ಟಿಫಿಕೇಟ್ ತಂದಿದ್ದ ಕಾಸರಗೋಡು ಜಿಲ್ಲೆಯ ನಾಲ್ವರು ಉಳ್ಳಾಲ ಪೊಲೀಸರು ತಲಪಾಡಿ ಗಡಿಭಾಗದಲ್ಲಿ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದು, ಇದೀಗ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಿದ ನಿಟ್ಟಿನಲ್ಲಿ ಕರ್ನಾಟಕ ಕೇರಳ ನಡುವಿನ ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದ್ದು, ಆರ್ ಟಿಪಿಸಿಆರ್ ರಿಪೋರ್ಟ್ ಇದ್ದವರನ್ನು ಮಾತ್ರ ಕರ್ನಾಟಕ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.

ತಲಪಾಡಿ ಗಡಿ ಪ್ರದೇಶದಲ್ಲೂ ದಕ್ಷಿಣ ಕನ್ನಡ ಜಿಲ್ಲಾಡಳಿತವು ತಪಾಸಣೆ ನಡೆಸುತ್ತಿದೆ. ಈ ವೇಳೆ ನಕಲಿ RTPCR ಪರೀಕ್ಷೆ ವರದಿ ತೋರಿಸಿ ಕರ್ನಾಟಕ ಪ್ರವೇಶಿಸಿದ ಕಾಸರಗೋಡು ಜಿಲ್ಲೆಯ ನಾಲ್ವರು ವ್ಯಕ್ತಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಇನ್ನೋವಾ ಕಾರಲ್ಲಿ ಆಗಮಿಸಿದ್ದ ಕಾಸರಗೋಡು ಜಿಲ್ಲೆಯ ಚೆರ್ವತ್ತೂರು ನಿವಾಸಿ ಆದಿಲ್ (25) ಮತ್ತು ಕಡಪುರ ನಿವಾಸಿ ಇಸ್ಮಾಯಿಲ್(48) ಹಾಗೂ ಬೈಕ್ ಮೂಲಕ ಬಂದು ಗಡಿ ಪ್ರವೇಶ ಮಾಡಿದ್ದ ಕಾಸರಗೋಡಿನ ಚೆರ್ವತ್ತೂರು ನಿವಾಸಿ ಹನೀನ್(31) ಮತ್ತು ಬಸ್ ಮೂಲಕ ಬಂದಿದ್ದ ಚೆಂಗಳ ನಿವಾಸಿ ಅಬ್ದುಲ್ ತಮೀಮ್ (19) ನನ್ನು ಉಳ್ಳಾಲ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಬಂಧಿತರ ವಿರುದ್ಧ ಉಳ್ಳಾಲ ಪೊಲೀಸರು ಎಪಿಡಮಿಕ್ ಆಕ್ಟ್, ವಂಚನೆ, ಫೋರ್ಜರಿ ಪ್ರಕರಣ ದಾಖಲಿಸಿದ್ದಾರೆ. ಆರ್ ಟಿಪಿಸಿಆರ್ ಪರೀಕ್ಷೆ ವರದಿಯ ಮಾದರಿಯಲ್ಲೇ ನಕಲಿ ಪ್ರಮಾಣ ಪತ್ರ ಮಾಡಿಸಿಕೊಂಡು ಇವರು ಕರ್ನಾಟಕ ಪ್ರವೇಶ ಮಾಡಿದ್ದರು. ತಲಪಾಡಿ ಗಡಿಯಲ್ಲಿ ವರದಿಯನ್ನು ಪರಿಶೀಲನೆ ನಡೆಸಿದಾಗ, ವರದಿ ನಕಲಿ ಎಂದು ತಿಳಿದುಬಂದಿದೆ.