Home News ಉಡುಪಿ ಕುಂದಾಪುರ | ಕೂಲಿ ಕೆಲಸಕ್ಕೆಂದು ತೋಟಕ್ಕೆ ಹೋಗಿದ್ದ ಇಬ್ಬರು ನದಿಯಲ್ಲಿ ಮುಳುಗಿ ಸಾವು

ಕುಂದಾಪುರ | ಕೂಲಿ ಕೆಲಸಕ್ಕೆಂದು ತೋಟಕ್ಕೆ ಹೋಗಿದ್ದ ಇಬ್ಬರು ನದಿಯಲ್ಲಿ ಮುಳುಗಿ ಸಾವು

Hindu neighbor gifts plot of land

Hindu neighbour gifts land to Muslim journalist

ಕೂಲಿ ಕೆಲಸಕ್ಕೆಂದು ತೋಟಕ್ಕೆ ಹೋದ ಇಬ್ಬರು ಯುವಕರು ಆಕಸ್ಮಿಕವಾಗಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಡುಪಿಯ ಕುಂದಾಪುರದಲ್ಲಿ ನಡೆದಿದೆ.

ನಗರದ ಅಲ್ಪಾಡಿ ಗ್ರಾಮದ ಗಂಟುಬೀಲು ಸಮೀಪ ಕೃಷಿ ಕೆಲಸದಲ್ಲಿ ನಿರತರಾಗಿದ್ದ ಮೋಹನ್ ನಾಯ್ಕ್ (21) ಮತ್ತು ಮಹಾಬಲ ನಾಯ್ಕ್ ಅವರ ಮಗ ಸುರೇಶ್ (19) ಮೃತಪಟ್ಟವರು .

ಮೃತಪಟ್ಟ ಇಬ್ಬರೂ ಬಡ ಕುಟುಂಬದವರಾಗಿದ್ದು, ಇಬ್ಬರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತಿದ್ದರು. ಗಂಟುಬೀಲು ಕೃಷ್ಣ ನಾಯಕ್ ಅವರಿಗೆ ಸೇರಿದ ತೋಟಕ್ಕೆ ಸೋಮವಾರ ಕೂಲಿ ಕೆಲಸ ಮಾಡಲೆಂದು ಹೋಗಿದ್ದು, ತಡವಾದರೂ ಹಿಂದಿರುಗದ ಕಾರಣದಿಂದ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ.

ಆದರೆ ಇವರು ಯಾವ ರೀತಿ ಮೃತ ಪಟ್ಟಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಇಬ್ಬರೂ ಒಟ್ಟಿಗೆ ನದಿಗೆ ಹೋದರೋ ಅಥವಾ ಇನ್ನೊಬ್ಬರು ಅಪಾಯದಲ್ಲಿದ್ದ ವ್ಯಕ್ತಿಯ ಜೀವವನ್ನು ಉಳಿಸಲು ಪ್ರಯತ್ನಿಸುವಾಗ ಮೃತಪಟ್ಟಿದ್ದಾರೋ ಎಂಬುದು ತಿಳಿದಿಲ್ಲ.

ಮೃತರಾದ ಮೋಹನ್ ನಾಯ್ಕ ತನ್ನ ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ ಮತ್ತು ಸುರೇಶ್ ನಾಯ್ಕ ಪೋಷಕರು ಮತ್ತು ಸಹೋದರನನ್ನು ಅಗಲಿದ್ದಾರೆ.