Home latest 60 ವರ್ಷ ಮೇಲ್ಪಟ್ಟ ಪುರುಷರೇ ಈಕೆಯ ಟಾರ್ಗೆಟ್ | ಪಾರ್ಕ್ ಗೆ ಕರೆಸಿಕೊಂಡು ವಿಡಿಯೋ ಮಾಡಿ...

60 ವರ್ಷ ಮೇಲ್ಪಟ್ಟ ಪುರುಷರೇ ಈಕೆಯ ಟಾರ್ಗೆಟ್ | ಪಾರ್ಕ್ ಗೆ ಕರೆಸಿಕೊಂಡು ವಿಡಿಯೋ ಮಾಡಿ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಮಹಿಳೆ ಅಂದರ್

Hindu neighbor gifts plot of land

Hindu neighbour gifts land to Muslim journalist

ಪಾರ್ಕ್ ಗೆ ಮಧ್ಯ ವಯಸ್ಕರು ಮತ್ತು 60 ವರ್ಷ ಮೇಲ್ಪಟ್ಟ ಪುರುಷರನ್ನು ಕರೆಸಿಕೊಂಡು ಅವರ ಜೊತೆಗಿರುವ ವೀಡಿಯೋ ಮಾಡಿ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಮಹಿಳೆ ಮತ್ತು ಓರ್ವ ಯುವಕನನ್ನು ಮಧ್ಯಪ್ರದೇಶದ ಭೋಪಾಲ್ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಕೆಲ ದಿನಗಳ ಹಿಂದೆ 65 ವರ್ಷದ ವೃದ್ಧರೊಬ್ಬರು ಪುತ್ರನೊಂದಿಗೆ ಆಗಮಿಸಿ ಮಹಿಳೆ ಮತ್ತು ಯುವಕನ ವಿರುದ್ಧ ದೂರು ದಾಖಲಿಸಿದ್ದರು. ಇಬ್ಬರು ತಮಗೆ 2 ಲಕ್ಷ ರೂ. ನೀಡಬೇಕೆಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ವೃದ್ಧ ಆರೋಪಿಸಿದ್ದರು. ದೂರಿನಲ್ಲಿ ಇಬ್ಬರ ಪರಿಚಯ ತಮಗಿಲ್ಲ ಎಂದು ಕರೆ ಮಾಡುತ್ತಿದ್ದ ಮೊಬೈಲ್ ಸಂಖ್ಯೆ ನೀಡಿದ್ದರು. ದೂರಿನನ್ವಯ ಪೊಲೀಸರು ಮಹಿಳೆ ಮತ್ತು ಓರ್ವ ಯುವಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ವೃದ್ಧ ವಿಮೆ ಮಾಡಿಸಲು ಮಹಿಳೆಗೆ ಫೋನ್ ಮಾಡಿದ್ದರು. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಮಾತುಕತೆ ನಡೆದಿತ್ತು. ಕಳೆದ ತಿಂಗಳು ಇಂದೋರ್ ನಲ್ಲಿರುವ ಮೇಘಧೂತ ಪಾರ್ಕ್ ನಲ್ಲಿ ಭೇಟಿಯಾಗುವಂತೆ ಮಹಿಳೆ ಹೇಳಿದ್ದಾಳೆ.

ವೃದ್ಧ ವಿಮೆ ಮಾಡಿಸಲು ದಾಖಲೆಗಳೊಂದಿಗೆ ಆಕೆ ಕರೆದಿದ್ದ ಪಾರ್ಕಿಗೆ ತೆರಳಿದ್ದರು. ಈ ವೇಳೆ ಇಬ್ಬರು ಕುಳಿತಿರುವ ವೀಡಿಯೋ ಮಾಡಿಕೊಂಡ ಆಕೆಯ ಜೊತೆಗಾರ ಯುವಕ ಬ್ಲ್ಯಾಕ್‍ಮೇಲ್ ಮಾಡಲಾರಂಭಿಸಿ ಎರಡು ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದಾನೆ.

ಮಹಿಳೆ ಮತ್ತು ಯುವಕ ನಿವೃತ್ತಿ ಪಡೆದ ಪುರುಷರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಸೋಶಿಯಲ್ ಮೀಡಿಯಾ ಮೂಲಕ ತನ್ನನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಮಹಿಳೆ, ಉಪಾಯವಾಗಿ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದಳು.

ನಂತರ ಉಪಾಯವಾಗಿ ಪಾರ್ಕ್ ಗಳಿಗೆ ಕರೆಸಿಕೊಂಡು ವೀಡಿಯೋ ಚಿತ್ರೀಕರಿಸಿ ಹಣಕ್ಕಾಗಿ ಪೀಡಿಸುತ್ತಿದ್ದಳು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.