ವಿಧಾನ ಸೌಧದಲ್ಲಿ ಸಚಿವ ಎಸ್.ಅಂಗಾರ ಅವರ ನೂತನ ಕಛೇರಿ ಶುಭಾರಂಭ | ಸುಳ್ಯ ಬಿಜೆಪಿ ಪ್ರಮುಖರು ಭಾಗಿ

Share the Article

ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಚಿವರು ಹಾಗು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರರವರ ಬೆಂಗಳೂರು ವಿಧಾನ ಸೌಧ ಕೊಠಡಿಯಲ್ಲಿ ಸಚಿವರ ಕಚೇರಿ ಪೂಜೆ ಕಾರ್ಯಕ್ರಮಕ್ಕೆ ಪುರೋಹಿತ ನಾಗರಾಜ್ ಭಟ್ ಅವರ ನೇತೃತ್ವದಲ್ಲಿ ಶುಕ್ರವಾರ ನಡೆಯಿತು.

ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ್ ರೈ ಕೆಡೆಂಜಿ,ಸುಭೋದ್ ಶೆಟ್ಟಿ ಮೇನಾಲ,ರಾಜ್ಯ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ಎ.ವಿ.ತೀರ್ಥರಾಮ, ಕೃಷ್ಣ ಶೆಟ್ಟಿ ಕಡಬ,ಸುಳ್ಯ ನ.ಪಂ.ಅಧ್ಯಕ್ಷ ವಿನಯ ಕಂದಡ್ಕ,ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ,ಸದಸ್ಯ ಪ್ರಸನ್ನ ದರ್ಬೆ, ಯುವಮೋರ್ಚಾ ಅಧ್ಯಕ್ಷ ಕೃಷ್ಣ, ಪ್ರಕಾಶ್ ಎನ್.ಕೆ ,ಸಚಿವ ಅಂಗಾರ ಅವರ ಪತ್ನಿ ವೇದಾವತಿ,ಮಕ್ಕಳಾದ ಪೂಜಾ,ಗೌತಮ್ ಮೊದಲಾದವರು ಪಾಲ್ಗೊಂಡಿದ್ದರು.

Leave A Reply