Home News ರಕ್ಷಾಬಂಧನಕ್ಕೆ ಮಹಿಳೆಯರಿಗೆ ಬಂಪರ್ ಕೊಡುಗೆ | ರಾಜ್ಯ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ!!!

ರಕ್ಷಾಬಂಧನಕ್ಕೆ ಮಹಿಳೆಯರಿಗೆ ಬಂಪರ್ ಕೊಡುಗೆ | ರಾಜ್ಯ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ!!!

Hindu neighbor gifts plot of land

Hindu neighbour gifts land to Muslim journalist

ರಕ್ಷಾ ಬಂಧನದ ದಿನದಂದು ಉತ್ತರಪ್ರದೇಶದ ಮಹಿಳೆಯರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಂಪರ್ ಆಫರ್ ಒಂದನ್ನು ನೀಡಿದ್ದಾರೆ.

ಹೌದು, ಕಳೆದ ವರ್ಷದಂದತೆಯೇ ಈ ವರ್ಷವೂ ಮಹಿಳೆಯರಿಗೆ ಮುಖ್ಯಮಂತ್ರಿ ಭರ್ಜರಿ ಕೊಡುಗೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಆಗಸ್ಟ್ 22ರಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತಿದೆ. ಈ ದಿನ ರಾಜ್ಯ ಸಾರಿಗೆ ಸಂಸ್ಥೆಯ ಯಾವುದೇ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿಯೇ ಪ್ರಯಾಣ ಮಾಡುವ ಆಫರ್ ನೀಡಲಾಗಿದೆ.

ಈ ವಿಶೇಷ ಆಫರ್ ಆಗಸ್ಟ್ 21ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದ್ದು, 22 ರ ಮಧ್ಯರಾತ್ರಿಯವರೆಗೆ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಉಚಿತ ಪ್ರಯಾಣದ ವೇಳೆ ಬಸ್ಸಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಸೂಕ್ತ ಭದ್ರತೆಯನ್ನು ಒದಗಿಸಲಾಗುತ್ತದೆ.

ಕೊರೋನಾದಿಂದಾಗಿ ಸಭೆ ಸಮಾರಂಭಗಳಿಗೆ ಈಗಾಗಲೇ ನಿರ್ಬಂಧಗಳನ್ನು ಹಾಕಲಾಗಿದೆ. ಸದ್ಯ ಕೊರೊನಾ 3ನೇ ಅಲೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಸಂಭ್ರಮಾಚಾರಣೆ ಮಾಡುವ ಬದಲು ಮನೆಯಲ್ಲಿಯೇ ರಕ್ಷಾಬಂಧನ ಆಚರಿಸುವಂತೆ ಕರೆ ನೀಡಲಾಗಿದೆ.