ಚಾಕೊಲೇಟ್ ತರಲು ಅಂಗಡಿಗೆ ಹೋಗಿದ್ದ ಬಾಲಕಿ ಮನೆಗೆ ಬಂದದ್ದು ಶವವಾಗಿ !

Share the Article

ಅಂಗಡಿಗೆ ಚಾಕೊಲೇಟ್ ತರಲು ಹೋಗಿದ್ದ ಬಾಲಕಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಶಶಿಧರ-ಶ್ರುತಿ ದಂಪತಿ ಪುತ್ರಿ ನಿಹಾರಿಕ (8) ಮೃತ ಬಾಲಕಿ. ಸೋಮವಾರ ಅಂಗಡಿಗೆ ಚಾಕಲೇಟ್ ತರಲು ತೆರಳುತ್ತಿದ್ದಳು. ಈ ವೇಳೆ ಏಕಾಏಕಿ ರಸ್ತೆಯಲ್ಲಿ ಕುಸಿದು ಬಿದ್ದು ನಿಹಾರಿಕ ಕೊನೆಯುಸಿರೆಳೆದಿದ್ದಾಳೆ. ಬಾಲಕಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ತಿಳಿದುಬಂದಿದೆ.

ಕುಸಿದು ಬಿದ್ದ ಬಾಲಕಿಯನ್ನು ತಕ್ಷಣ ಜಗಳೂರಿನ ಸಾರ್ವಜನಿ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಬಾಲ ಮೃತಪಟ್ಟಿರುವುದನ್ನು ವೈದ್ಯರು ದೃಢೀಕರಿದರು.

ಮಗಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆ ನಡೆದಿದ್ದು, ಶೀಘ್ರವೆ ಸಾವಿಗೆ ಕಾರಣ ತಿಳಿಯಲಿದೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply