ಮಂಗಳೂರು | ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ ,ಓರ್ವ ಬಂಧನ | ಮೋಸ ಹೋಗದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಅಗತ್ಯ
ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ – ನಂಬಿಸಿ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ ಪ್ರಕರಣ ವೊಂದರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಲ್ಮಠದ ಖಾಸಗಿ ಆಸ್ಪತ್ರೆ ಸಮೀಪದ ನಿವಾಸಿ ಚರಿ ಇಥಿಯಲ್ ಸಿಖಾ (32) ಬಂಧಿ ತ. ಈತ ವಿದೇಶದಲ್ಲಿ ಕಚೇರಿ ಯೊಂದರಲ್ಲಿಕೆಲಸಇರುವುದಾಗಿ, ಅದಕ್ಕೆ ಸಂಬಂಧ ಪಟ್ಟ ವೀಸಾ ಮಾಡಿ ಕೊಡುವುದಾಗಿ ಹೇಳಿ ಮಹಿಳೆಯೊಬ್ಬರಿಂದ ಲಕ್ಷಾಂತರ ಹಣ ಪಡೆದಿದ್ದ. ಕಾವೂರಿನ ಮಹಿಳೆಯೊಬ್ಬರು ವಿದೇಶ ದಲ್ಲಿ ಉದ್ಯೋಗಕ್ಕೆ ತೆರಳಲು ಉದ್ದೇಶಿಸಿ ಎಪ್ರಿಲ್ ತಿಂಗಳ ಆರಂಭದಲ್ಲಿ ನಗರದ ಜೆರಿ ಇಥಿಯಲ್ ಸಿಖಾ ಎಂಬ ವರ ಕಚೇರಿಗೆ ತೆರಳಿದ್ದರು. ಉದ್ಯೋಗದ ಬಗ್ಗೆ ವಿಚಾರಿಸಿ ದಾಗ, ಯುರೋಪ್‌ನ ಲಿಥುವೇ ನಿಯಾ ದೇಶದಲ್ಲಿ ಕಚೇರಿಯಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆ. ತಿಂಗಳಿಗೆ 3.5 ಲಕ್ಷ ರೂ.ವೇತನ, ಜೊತೆಗೆ ವೀಸಾ ಕೊಡ ಲಾಗುವುದು. ಇದಕ್ಕೆ ಒಟ್ಟು 5.5 ಲ. ರೂ. ವೆಚ್ಚ ತಗಲುವುದಾಗಿ ಆರೋಪಿ ಮಹಿಳೆಗೆ ವಿವರನೀಡಿದ್ದ ಎಂದು ಮಂಗಳೂರುಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಉದ್ಯೋಗ ಲಭಿಸುವ ಆಶಾ ಭಾವನೆಯಲ್ಲಿ ಮಹಿಳೆಯು ಚಿನ್ನಾಭರಣ ಅಡವಿಟ್ಟು 1 ಲಕ್ಷ ರೂ. ನಗದನ್ನು ನೇರವಾಗಿ 1ಲಕ್ಷ ಹಣವನ್ನು ನೆಫ್ಟ್ ಮೂಲಕ
ಆರೋಪಿಯ ಕಚೇರಿಯ ಬ್ಯಾಂಕ್ ಖಾತೆಗೆ ಪಾವತಿಸಿದ್ದರು.
ನಂತರ ಆರೋಪಿ ಸಂಬಂಧಪಟ್ಟ ಪ್ರಾಧಿಕಾರದಿಂದ ಪರವಾನಿಗೆ ಪಡೆಯದಿರುವುದು ಮಹಿಳೆಯ ಗಮನಕ್ಕೆ ಬಂದಿದೆ. ಈ ವೇಳೆ ಹಣ ವಾಪಸ್ ಮಾಡಲು ಕೇಳಿದಾಗ ವಂಚಿಸಿರುವುದಾಗಿ ಮಹಿಳೆ ದೂರು ನೀಡಿದ್ದರೆಂದು ಕಮಿಷನರ್ ಮಾಹಿತಿ ನೀಡಿದರು.
ಮಂಗಳೂರು ಉತ್ತರ (ಬಂದರ್) ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಯೋರ್ವನನ್ನು ಬಂಧಿಸ ಲಾಗಿದೆ. ಬಂಧಿತ ಆರೋಪಿಯಿಂದಲೇ ವಂಚನೆಗೊಳಗಾದ ಮತ್ತಿಬ್ಬರುಸಂತ್ರಸ್ತರು ದೂರು ನೀಡಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದರು.
ವಿದೇಶದಲ್ಲಿ ಉದ್ಯೋಗ ಕೊಡಿ ಸುವುದಾಗಿ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗಾಗಲೇ ವಿದೇಶಾಂಗ ವ್ಯವಹಾರ ಸಚಿವಾಲಯದ ಅಂಗಸಂಸ್ಥೆ ವಲಸಿಗರ ರಕ್ಷಕ ಸಂಸ್ಥೆಯಿಂದ ವಿದೇಶಿ ಉದ್ಯೋಗ ನೇಮಕಾತಿ ಏಜೆನ್ಸಿಗಳ ಅಧಿಕೃತ ಪಟ್ಟಿ ಬಿಡುಗಡೆಗೊಳಿಸಿತ್ತು. ಯಥಾವತ್ ಪ್ರತಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ವಿದೇಶಿ ಉದ್ಯೋಗದ ಆಮಿಷ ನೀಡಿ ವಂಚನೆ ಆಗಿದ್ದರೆ, ಪೊಲೀಸರಿಗೆ ದೂರು ನೀಡಬಹುದಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.