Home News ಇನ್ನು ಮುಂದೆ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೂ ಪ್ರವೇಶಾವಕಾಶ | ಪ್ರಧಾನಿ ಮೋದಿ ಮಹತ್ವದ ಘೋಷಣೆ

ಇನ್ನು ಮುಂದೆ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೂ ಪ್ರವೇಶಾವಕಾಶ | ಪ್ರಧಾನಿ ಮೋದಿ ಮಹತ್ವದ ಘೋಷಣೆ

Hindu neighbor gifts plot of land

Hindu neighbour gifts land to Muslim journalist

ಸ್ವಾತಂತ್ರ್ಯೋತ್ಸವದ ಈ ಅಮೃತ ಘಳಿಗೆಯಲ್ಲಿ ಭಾರತವು ಲೈಂಗಿಕ ಸಮಾನತೆಯತ್ತ ಹೊಸ ಹೆಜ್ಜೆ ಇಡಲಿದೆ. ಇದಕ್ಕೆ ಮುನ್ನುಡಿಯಾಗಿ ಇಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಮಹತ್ವದ ಘೋಷಣೆ ಮಾಡಿದ್ದಾರೆ.

ಅದೇನೆಂದರೆ, ಈವರೆಗೆ ಬಾಲಕರಿಗೆ ಮಾತ್ರ ಪ್ರವೇಶಾವಕಾಶ ನೀಡುತ್ತಿದ್ದ ದೇಶದ ಪ್ರತಿಷ್ಠಿತ ಸೈನಿಕ ಶಾಲೆಗಳ ಬಾಗಿಲುಗಳು, ಇನ್ನು ಮುಂದೆ ಬಾಲಕಿಯರಿಗೂ ತೆರೆದಿವೆ.

ಲಕ್ಷಾಂತರ ಹೆಣ್ಣುಮಕ್ಕಳಿಂದ ತಮಗೂ ಸೈನಿಕ ಶಾಲೆಯ ಓದುವ ಆಸೆಯಿದೆ ಎಂಬ ಸಂದೇಶಗಳು ಬರುತ್ತಿದ್ದವು. ಸೈನಿಕ ಶಾಲೆಗಳ ಬಾಗಿಲು ಅವರಿಗೂ ತೆರೆಯಬೇಕು ಎಂದ ಮೋದಿ, ಎರಡೂವರೆ ವರ್ಷಗಳ ಹಿಂದೆ ಮಿಜೊರಾಂನ ಸೈನಿಕ ಶಾಲೆಯನ್ನು ಪ್ರಾಯೋಗಿಕವಾಗಿ ಬಾಲಕಿಯರಿಗೆ ತೆರೆಯಲಾಯಿತು. ಈಗ ದೇಶದ ಎಲ್ಲಾ ಸೈನಿಕ ಶಾಲೆಗಳಲ್ಲೂ ಹೆಣ್ಣುಮಕ್ಕಳಿಗೆ ಅವಕಾಶ ನೀಡಬೇಕೆಂದು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.

ಶಿಕ್ಷಣವಿರಲಿ, ಕ್ರೀಡೆಗಳಿರಲಿ, ಬೋರ್ಡ್ ಫಲಿತಾಂಶಗಳಾಗಲಿ ಅಥವಾ ಒಲಿಂಪಿಕ್ಸ್ ಪದಕಗಳಾಗ ಎಲ್ಲದರಲ್ಲೂ ನಮ್ಮ ಹೆಣ್ಣುಮಕ್ಕಳು ಮಹತ್ತರ ಸಾಧನೆ ತೋರಿಸುತ್ತಿರುವುದು ರಾಷ್ಟ್ರಕ್ಕೆ ಗರ್ವದ ವಿಚಾರ. ಇಂದು ಭಾರತದ ಹೆಣ್ಣುಮಕ್ಕಳು ತಮ್ಮ ಸ್ಥಾನವನ್ನು ಗಳಿಸಲು ಉತ್ಸುಕರಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಅತ್ಯಂತ ಶಿಸ್ತುಬದ್ಧ ಶಿಕ್ಷಣ ಒದಗಿಸುವ ಮಾದರಿ ಶಾಲೆಗಳಾದ ಸೈನಿಕ ಶಾಲೆಗಳನ್ನು ಭಾರತದ ರಕ್ಷಣಾ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ ಸೈನಿಕ್ ಸ್ಕೂಲ್ಸ್ ಸೊಸೈಟಿ ನಡೆಸುತ್ತದೆ. ರಕ್ಷಣಾ ಪಡೆಗಳಲ್ಲಿ ಉನ್ನತ ಅಧಿಕಾರಿಗಳಾಗಿ ಭವಿಷ್ಯ ರೂಪಿಸಿಕೊಳ್ಳಲು ಈ ಶಾಲೆಗಳು ಉತ್ತಮ ವೇದಿಕೆಗಳಾಗಿವೆ. ದೇಶಾದ್ಯಂತ 33 ಸೈನಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶಾವಕಾಶ ನೀಡಲಾಗುತ್ತದೆ.