ವಿ.ಹಿ.ಪ ಶ್ರೀ ರಾಮ ಶಾಖೆ ಏನೆಕಲ್ಲು ವತಿಯಿಂದ ಭಾರತ ಮಾತಾ ಪೂಜನ ಕಾರ್ಯಕ್ರಮ|ಊರಿನ ಮಾಜಿ ಸೈನಿಕರಿಗೆ ಸನ್ಮಾನ

Share the Article

ವಿಶ್ವ ಹಿಂದೂ ಪರಿಷತ್ ಬಜರಂಗದಳ ಶ್ರೀ ರಾಮ ಶಾಖೆ ಯೇನೆಕಲ್ಲು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ವಿಶೇಷವಾಗಿ ದೇಶ ಸೇವೆ ಮಾಡಿದ ಊರಿನ ಮಾಜಿ ಸೈನಿಕರಾದ ಸುಬೇದಾರ್ ವಾಸುದೇವ ಬಾನಡ್ಕ,ಭವಾನಿ ಶಂಕರ ಪೂಂಬಾಡಿ,ಹರಿಶ್ಚಂದ್ರ ಪರಮಲೆ ಇವರುಗಳನ್ನು ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಶೂರಪ್ಪ ಬಾಲಾಡಿ ಇವರು ಸನ್ಮಾನಿಸಿದರು. ಮಾಜಿ ಸೈನಿಕರು ಅವರ ಸೇವಾ ವೃತ್ತಿಯ ಬಗ್ಗೆ ಮತ್ತು ವಿಶ್ವಹಿಂದೂ ಪರಿಷತ್ತಿನ ಕಾರ್ಯವೈಖರಿ ಬಗ್ಗೆ ಸವಿಸ್ತಾರವಾಗಿ ನುಡಿದರು.ಶ್ರೀ ರಾಮ ಶಾಖೆಯ ಅಧ್ಯಕ್ಷರಾದ ಲೋಕೇಶ್ ಅಲ್ಪೆ ಮಾತನಾಡಿ ವಿಶ್ವ ಹಿಂದೂ ಪರಿಷತ್ತು ಬೆಳೆದು ಬಂದ ಹಾದಿ ಅದರ ದ್ಯೆಯ ಮತ್ತು ಸಿದ್ದಾಂತಗಳ ಬಗ್ಗೆ ಪ್ರತಿಪಾದಿಸಿದರು.ತಾಲೂಕು ಪಂಚಾಯತ್ ಸದಸ್ಯ ಅಶೋಕ್ ನೆಕ್ರಾಜೆ ಮಾತನಾಡಿ ಎಲ್ಲರು ಪಕ್ಷ ಬೇದ ಮರೆತು ಹಿಂದೂ ಸಂಘಟನೆಯಲ್ಲಿ ಜೊತೆಯಾಗಿ ಹಿಂದುತ್ವವದ ಕೆಲಸ ಮಾಡಬೇಕು ಎಂದರು.ಶ್ರೀ ರಾಮ ಶಾಖೆಯ ಪ್ರಧಾನ ಕಾರ್ಯದರ್ಶಿ ಅಭಿನಂದನ್ ಜೀ ಮತ್ತು ಶ್ರೀ ರಾಮ ಶಾಖೆಯ ಸಂಚಾಲಕರಾದ ವಿನ್ಯಾಸ್ ಕೋಟಿಮನೆ ಮತ್ತಿತರರು ಉಪಸ್ಥಿತರಿದ್ದರು.ಅಶೋಕ್ ಅಂಬೇಕಲ್ಲು ಸ್ವಾಗತಿಸಿ,ಕುಮಾರ್ ಪೈಲಾಜೆ ವಂದಿಸಿ,ಮೋಹಿತ್ ಜೇನುಕೋಡಿ ಇವರು ಕಾರ್ಯಕ್ರಮ ನಿರೂಪಿಸಿದರು.ವಿಶ್ವಹಿಂದೂ ಪರಿಷತ್ ಬಜರಂಗದಳ ಶ್ರೀರಾಮ ಶಾಖೆಯ ಎಲ್ಲಾ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು ನಂತರ ರಾಷ್ಟ್ರಗೀತೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು..

Leave A Reply