ಹಲವು ವಾರೆಂಟ್ ಪ್ರಕರಣ ಆರೋಪಿ ರಿಜ್ವಾನ್ ಜೋಕಟ್ಟೆಯನ್ನು ಬಂಧಿಸಿದ ಬಂಟ್ವಾಳ ಪೊಲೀಸರು

Share the Article

ಹಲವಾರು ವಾರೆಂಟ್ ಪ್ರಕರಣದ ಆರೋಪಿ ಮಂಗಳೂರು ತಾಲೂಕಿನ ಜೊಕಟ್ಟೆ ನಿವಾಸಿ ರಿಜ್ವಾನ್ ಯಾನೆ ರಿಚ್ಚು(30) ಎಂಬಾತನನ್ನು ಬಂಟ್ವಾಳ ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ ನೇತೃತ್ವದ ವಿಶೇಷ ತಂಡ ಬಂಧಿಸಿದೆ.

ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದನ ಕಳ್ಳತನ ಸೇರಿದಂತೆ ಅನೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಗಳಿಗೆ ಸೇರಿದಂತೆ ರಿಜ್ವಾನ್ ನ್ಯಾಯಾಲಯಕ್ಕೆ ಹಾಜರಾಗದೆ ಈತನ ಮೇಲೆ ವಾರೆಂಟ್ ಜಾರಿಯಾಗಿದ್ದರೂ ತಲೆಮರೆಸಿಕೊಂಡು ತಿರುಗಾಡುವ ಬಗ್ಗೆ ಮಾಹಿತಿ ಮೇಲೆ ಬಂಟ್ವಾಳ ಡಿ.ವೈ.ಎಸ್.ವೆಲೆಂಟೈನ್ ಡಿ.ಸೋಜ ಅವರ ತಂಡ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.

ಈತನ ಮೇಲೆ ಬಂಟ್ವಾಳ ಅಲ್ಲದೆ ಕಾರ್ಕಳ ಗ್ರಾಮಾಂತರ, ಬಜಪೆ, ಪುತ್ತೂರು, ಗೋಕರ್ಣ, ಹಾಗೂ ಕೊಣಾಜೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾರೆಂಟ್ ಆರೋಪಿಯಾಗಿದ್ದ.

Leave A Reply