Home News ವಾರಾಂತ್ಯ ನಡೆಯುವ ಪದವಿ ಪರೀಕ್ಷೆ ಮುಂದೂಡಿಕೆ | ಮಂಗಳೂರು ವಿ.ವಿ.ಪ್ರಕಟಣೆ

ವಾರಾಂತ್ಯ ನಡೆಯುವ ಪದವಿ ಪರೀಕ್ಷೆ ಮುಂದೂಡಿಕೆ | ಮಂಗಳೂರು ವಿ.ವಿ.ಪ್ರಕಟಣೆ

Hindu neighbor gifts plot of land

Hindu neighbour gifts land to Muslim journalist

ಕೋವಿಡ್ ನಿಯಂತ್ರಣಕ್ಕಾಗಿ ವಾರಾಂತ್ಯ ಕರ್ಫ್ಯೂ ಇರುವ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯವಾಗುವ ಕಾರಣ ಆ.14 ಮತ್ತು ಆ.28ರಂದು ನಿಗದಿಪಡಿಸಿದ್ದ ಪದವಿ, ಮತ್ತು ಸ್ನಾತಕೋತ್ತರ ಪದವಿಯ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಈ ದಿನಾಂಕದಂದು ನಿಗದಿಪಡಿಸಿದ್ದ ಪರೀಕ್ಷೆಗಳ ದಿನಾಂಕವನ್ನು ಬದಲಾವಣೆ ಮಾಡಿ ಮರು ನಿಗದಿ ಪಡಿಸಿದ್ದು, ಕೋರ್ಸುವಾರು, ವಿಷಯವಾರು ಪರಿಷ್ಕೃತ ಪರೀಕ್ಷಾ ವೇಳಾ ಪಟ್ಟಿಯನ್ನು ವಿಶ್ವವಿದ್ಯಾನಿಲಯದ ಅಧಿಕೃತ ಜಾಲತಾಣ ಹಾಗೂ ಕಾಲೇಜುಗಳ ಮೂಲಕ ಆ.12ರಿಂದ ಪಡೆದುಕೊಳ್ಳಬಹುದಾಗಿದೆ.

ಉಳಿದಂತೆ ಈ ಹಿಂದೆ ಪ್ರಕಟಿಸಿದ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ ಇರುವುದಿಲ್ಲ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರ ಪ್ರಕಟಣೆ ತಿಳಿಸಿದೆ.