“ಬಿರ್ದ್’ದ ಕಂಬುಲ” ಚಿತ್ರದ ಶೀರ್ಷಿಕೆ ಬಿಡುಗಡೆ | ಸುಬ್ರಹ್ಮಣ್ಯದಲ್ಲಿ ಸಚಿವ ಎಸ್.ಅಂಗಾರ ಅವರಿಂದ ಬಿಡುಗಡೆ
ಸುಬ್ರಹ್ಮಣ್ಯ: ಎ.ಆರ್.ಪ್ರೊಡಕ್ಷನ್ ಲಾಂಛನದಲ್ಲಿ ಅರುಣ್ ರೈ ತೋಡಾರ್ ನಿರ್ಮಾಣದಲ್ಲಿ ಖ್ಯಾತ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಬಹುಭಾಷೆಯಲ್ಲಿ ತಯಾರಾಗುತ್ತಿರುವ “ಬಿರ್ದ್’ದ ಕಂಬುಲ” ಸಿನೆಮಾದ ಶಿರ್ಷಿಕೆ ಬಿಡುಗಡೆ ಕಾರ್ಯಕ್ರಮ ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಿತು.
ರಾಜ್ಯ ಬಂದರು, ಮೀನುಗಾರಿಕೆ ಸಚಿವ ಎಸ್.ಅಂಗಾರ ಅವರು ಬಿರ್ದ್’ದ ಕಂಬುಲ ಚಿತ್ರದ ಶೀರ್ಷಿಕೆ ಬಿಡುಗಡೆಗೊಳಿಸಿದರು. ಬಿರ್ದ್’ದ ಕಂಬುಲ ಚಿತ್ರವು ನಾಲ್ಕು ಭಾಷೆಗಳಲ್ಲಿ ತಯಾರಾಗುತ್ತಿದೆ.
ತುಳುನಾಡಿನ ಕಂಬಳ ಹಿನ್ನಲೆಯಲ್ಲಿ ಚಿತ್ರಕಥೆ ಹೊಂದಿರುವ ಸಿನೆಮಾ ಇದಾಗಿದ್ದು, ಈಗಾಗಲೇ ಇದರ ಕಥೆಯನ್ನು ಈ ಭಾಗದಲ್ಲಿ ಸಂಶೋಧನಾತ್ಮಕ ಸಂಗ್ರಹಿಸಿ ಸಿದ್ಧಪಡಿಸಲಾಗಿದೆ. ಈ ಚಿತ್ರ ವಿವಿಧ ಭಾಷೆಗಳಲ್ಲಿ ತೆರೆಕಾಣಲಿದೆ.
ಚಿತ್ರದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಮಾತನಾಡಿ, ತುಳುನಾಡಿನ ಕಂಬಳದ ಬಗ್ಗೆ ಚಿತ್ರ ಮಾಡುವುದಾದರೆ ನೂರಕ್ಕೂ ಅಧಿಕ ಕಥೆಗಳು ಸಿಗಬಹುದು ಎಂದು ನನಗೆ ಮನದಟ್ಟಾಗಿದೆ. ತುಳುವಿನಲ್ಲಿ ಚಿತ್ರ ನಿರ್ದೇಶಿಸಬೇಕು ಎಂಬ ನನ್ನ ಬಯಕೆ ಇದರೊಂದಿಗೆ ಈಡೇರುತ್ತಿದೆ ಎಂದರು.
ನಿರ್ಮಾಪಕ ಅರುಣ್ ರೈ ತೋಡಾರ್, ಪ್ರಮುಖರಾದ ವಿಜಯ ಕುಮಾರ್ ಕೋಡಿಯಾಲಬೈಲ್, ಸುಂದರ್ ರೈ ಮಂದಾರ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಇಒ ಡಾ.ನಿಂಗಯ್ಯ ಸೇರಿ ಚಿತ್ರ ತಂಡದ ನಟರು, ಪ್ರಮುಖರು ಉಪಸ್ಥಿತರಿದ್ದರು.