ಗೃಹಸಚಿವ ಆರಗ ಜ್ಞಾನೇಂದ್ರರಿಂದ ಜಬರ್ದಸ್ತ್ ನ್ಯೂಸ್ | ವಾಹನ ಸವಾರರಿಂದ ಸ್ಪಾಟ್ ಫೈನ್ ಕಲೆಕ್ಷನ್ ಇನ್ನು ಮಾಡೋಹಾಗಿಲ್ಲ
ಬೆಂಗಳೂರು : ಗೃಹ ಸಚಿವರಾದ ಬಳಿಕ ಆರಗ ಜ್ಞಾನೇಂದ್ರ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ಸ್ಥಳದಲ್ಲೇ ಟ್ರಾಫಿಕ್ ದಂಡ ಪಾವತಿಯನ್ನು ರದ್ದುಗೊಳಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಏರುತ್ತಿರುವ ಪೆಟ್ರೋಲ್ ಡೀಸೆಲ್ ದರದ ಮಧ್ಯೆಯೂ ವಾಹನ ಸಂಚಾರರಿಗೆ ಇದೊಂದು ಭರ್ಜರಿ ಸಿಹಿ ಸುದ್ದಿಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಾಹನಗಳನ್ನು ಅಡ್ಡಗಟ್ಟಿ ಅಲ್ಲೇ ದಂಡ ಪಡೆದುಕೊಳ್ಳದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಟ್ರಾಫಿಕ್ ಪೊಲೀಸರು ಬಳಸುತ್ತಿದ್ದ ಮಷಿನ್‌ಗಳನ್ನು ಆಯಾ ಪೊಲೀಸ್ ಠಾಣೆಗಳಿಗೆ ಒಪ್ಪಿಸುವಂತೆ ಸೂಚನೆ ನೀಡಿದ್ದಾರೆ.
ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರರಿಗೆ ಪೊಲೀಸರು ಪಿಡಿಎ ಮಷಿನ್ ಗಳನ್ನು ಬಳಸಿ ಸ್ಪಾಟ್ ಫೈನ್ ಕಲೆಕ್ಷನ್ ಮಾಡುತ್ತಿದ್ದರು. ಪಿಡಿಎ ಮಷಿನ್ ಗಳ ವಿರುದ್ಧ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿತ್ತು.
ಕೆಲವೊಮ್ಮೆ ಫೈನ್ ಕಟ್ಟಿದ್ದರೂ ಕೂಡ ಮಷಿನ್ ಗಳು ಹಿಂದಿನ ದಾಖಲೆಯನ್ನೇ ತೋರಿಸುತ್ತಿದ್ದವು. ಈ ಸಂಬಂಧ ಮಾಹಿತಿ ಪಡೆದಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಇದೀಗ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಟ್ರಾಫಿಕ್ ಸ್ಪಾಟ್ ಫೈನ್ ಕ್ಯಾನ್ಸಲ್ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಟ್ರಾಫಿಕ್ ಜಂಟಿ ಆಯುಕ್ತ ರವಿಕಾಂತೇಗೌಡ, ತಾತ್ಕಾಲಿಕವಾಗಿ ಪಿಡಿಎ ಮಷಿನ್ ಗಳ ಮೂಲಕ ಫೈನ್ ನಿಲ್ಲಿಸಲಾಗಿದ್ದು, ಟ್ರಾಫಿಕ್ ನಿಯಮಗಳನ್ನು ಬ್ರೇಕ್ ಮಾಡಿದರೆ ಡಿಜಿಟಲ್ ಕ್ಯಾಮೆರಾದಲ್ಲಿ ಸೆರೆಯಾಗಲಿದೆ. ಹಾಗಾಗಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ಇನ್ನು ಮುಂದೆ ಫೈನ್ ರೆಸಿಪ್ಟ್ ಮನೆಗೆ ಬರಲಿದೆ ಎಂದು ವಾಹನ ಸವಾರರಿಗೆ ಎಚ್ಚರಿಸಿದ್ದಾರೆ.