ಮೂಡುಬಿದಿರೆ: ರಂಗಸ್ಥಳದಲ್ಲೇ ಕುಸಿದು ಬಿದ್ದ ಯಕ್ಷಗಾನ ಪಾತ್ರಿ | ಮರಳಿ ಚೇತರಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದ ಅಮ್ಮುಂಜೆ ಮೋಹನ್ ಕುಮಾರ್

Share the Article

ಯಕ್ಷಗಾನದ ಸಂದರ್ಭದಲ್ಲಿ ಪಾತ್ರಧಾರಿಯೊಬ್ಬರು ಆಕಸ್ಮಿಕವಾಗಿ ಕುಸಿದು ಬಿದ್ದು,ಆ ಬಳಿಕ ಚೇತರಿಸಿಕೊಂಡು ಮರಳಿ ರಂಗ ಪ್ರದರ್ಶನ ನೀಡಿದ ಘಟನೆ ನಿನ್ನೆ ಮೂಡುಬಿದಿರೆಯಲ್ಲಿ ನಡೆದಿದೆ.

ನಿನ್ನೆ ನಡೆದ ಕರ್ಣಾರ್ಜುನ ಯಕ್ಷಗಾನದ ಸಂದರ್ಭದಲ್ಲಿ ಅರ್ಜುನನ ವೇಷಧಾರಿಯಾಗಿ ಪಾತ್ರದಲ್ಲಿದ್ದ ಶ್ರೀ ಅಮ್ಮುಂಜೆ ಮೋಹನ್ ಕುಮಾರ್ ಅವರು ರಂಗಸ್ಥಳದಲ್ಲೇ ಕುಸಿದಿದ್ದಾರೆ.

ಮಹಾಮಾರಿಯಿಂದಾಗಿ ನಿಂತಿದ್ದ ಯಕ್ಷಗಾನ ಪ್ರದರ್ಶನ, ಸುಮಾರು 5 ತಿಂಗಳುಗಳ ಬಳಿಕ ಪ್ರಾರಂಭಗೊಂಡಿದ್ದು, ಮೋಹನ ಹಲವು ಸಮಯದ ಬಳಿಕ ರಂಗಸ್ಥಳ ಪ್ರವೇಶಿಸಿದ್ದು, ಬೆಳಕಿನ ಪ್ರಖರತೆಗೆ ತಲೆ ಸುತ್ತು ಬಂದು ಬಿದ್ದಿದ್ದಾಗಿ ಚೇತರಿಸಿಕೊಂಡ ಮೋಹನ್ ತಿಳಿಸಿದ್ದಾರೆ. ಆಕಸ್ಮಿಕವಾಗಿ ನಡೆದ ಘಟನೆಯ ಬಳಿಕ ಮರಳಿ ತಾನು ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಸರಳ, ಸಜ್ಜನ ವ್ಯಕ್ತಿತ್ವದ ಮೋಹನ್ ಕುಮಾರ್ ಅವರ ಮೇಲೆ ಯಕ್ಷ ಮಾತೆಯ ಅನುಗ್ರಹ ಸದಾ ಇದ್ದು ಇನ್ನು ಮುಂದೆಯೂ ಯಕ್ಷ ಲೋಕದ ದಿಗ್ಗಜನಾಗಿ ಮೂಡಿ ಬರಲಿ ಎಂಬುವುದು ಅಭಿಮಾನಿಗಳ ಆಶಯವಾಗಿದೆ.

Leave A Reply