ಸವಣೂರು : ದಲಿತ ಮುಖಂಡ ಶಿವಪ್ಪ ಅಟ್ಟೋಳೆ ಅವರಿಗೆ ಶ್ರದ್ಧಾಂಜಲಿ

Share the Article

ಸವಣೂರು :ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸವಣೂರು ಗ್ರಾಮ ಸಮಿತಿ ಹಾಗೂ
ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ಪ್ರೋ ಕೃಷ್ಣಪ್ಪ ಸ್ಥಾಪಿತ)ಪುತ್ತೂರು ತಾಲೂಕು ಮತ್ತು ಕಡಬ ತಾಲೂಕು ಶಾಖೆ ಇದರ ಜಂಟಿ ಆಶ್ರಯದಲ್ಲಿ ದಿ.ಶಿವಪ್ಪ ಅಟ್ಟೋಳೆಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಆ.1ರಂದು ಮಾಂತೂರು ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಗಣೇಶ್ ಗುರಿಯಾನ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಹಿರಿಯ ದಲಿತ ಮುಖಂಡರು ಮತ್ತು SDPI ರಾಜ್ಯ ಸಮಿತಿ ಸದಸ್ಯ ಆನಂದ ಮಿತ್ತಬೈಲ್, ಸುಳ್ಯ ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಎಂ ಕೆ ಮುಸ್ತಫಾ,ದ.ಸಂ‌.ಸ ಕಡಬ ತಾಲೂಕು ಸಂಚಾಲಕ
ಉಮೇಶ್ ಕೊಡಿಂಬಾಳ,ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಶೇಷಪ್ಪಬೆದ್ರಕಾಡು,ಎಸ್.ಡಿ.ಎ.ಯು ಪುತ್ತೂರು ತಾಲೂಕು ಅಧ್ಯಕ್ಷ ಹಮೀದ್ ಸಾಲ್ಮರ,ಎಸ್.ಡಿ.ಪಿ.ಐ ಸವಣೂರು ಗ್ರಾಮ ಸಮಿತಿ ಅಧ್ಯಕ್ಷ ,ಸವಣೂರು ಗ್ರಾ.ಪಂ.ಸದಸ್ಯ ರಜಾಕ್ ಕೆನರಾ,ಸವಣೂರು ಗ್ರಾ.ಪಂ.ಸದಸ್ಯರಾದ ಬಾಬು.ಯನ್,ಎಂ ಎ ರಫೀಕ್, ಚೆನ್ನು ಮಾಂತೂರು,ಮಾಜಿ ಸದಸ್ಯೆ ಮೀನಾಕ್ಷಿ ಬಂಬಿಲ ಮೊದಲಾದವರು ಪಾಲ್ಗೊಂಡು ಅಗಲಿದ ಮುಖಂಡರಿಗೆ ನುಡಿನಮನ ಸಲ್ಲಿಸಿದರು.

ಪುಟ್ಟಣ್ಣತೋಟಂತಿಲ,
ಮಾದವ ದೇವಶ್ಯ,ರಮೇಶ ಆಟ್ಟೋಲೆ ಹಾಗೂ ದ.ಸಂ.ಸ ಮತ್ತು ಎಸ್.ಡಿ ಪಿ ಐ ಕಾರ್ಯಕರ್ತರು ಭಾಗವಹಿಸಿದರು
ಅಬ್ದುಲ್ ರಝಾಕ್ ಸ್ವಾಗತಿಸಿ,ಸಿದ್ದೀಕ್ ಅಲೆಕ್ಕಾಡಿ ನಿರೂಪಿಸಿದರು.

Leave A Reply