ಕೊಯಿಲ ಜಾನುವಾರು ಏಲಂ ರದ್ದು ಮಾಡಿದ ಅಧಿಕಾರಿಗಳು | ವಿ.ಹಿಂ.ಪ,ಬಜರಂಗದಳದ ಪ್ರತಿಭಟನೆ ಹಿಂದಕ್ಕೆ | ಎಚ್ಚರಿಕೆಗೆ ಮಣಿದ ಇಲಾಖೆ

Share the Article

ಕಡಬ : ಕಡಬ ತಾಲೂಕಿನ ಕೊಯಿಲದಲ್ಲಿರುವ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕರ ಕಛೇರಿ, ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ ಜು.29ರಂದು ನಡೆಯಲಿದ್ದ ಜಾನುವಾರು ಏಲಂ ರದ್ದು ಪಡಿಸಲಾಗಿದೆ.

ಜು.29ರಂದು ಮಲೆನಾಡು ಗಿಡ್ಡ ಮತ್ತು ಮುದ್ರಾ ಎಮ್ಮೆ ಜಾನುವಾರುಗಳನ್ನು ರೈತರು/ಪಶುಪಾಲಕರಿಗೆ ಬಹಿರಂಗ ಹರಾಜು ಮೂಲಕ ವಿಲೇವಾರಿಯ ಮಾಡುವ ಸಾರ್ವಜನಿಕ ಹರಾಜನ್ನು ಕರೆಯಲಾಗಿತ್ತು.

ಈ ಕುರಿತು ಪ್ರಕಟಣೆ ನೀಡಿರುವ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕರು ಅನಿವಾರ್ಯ ಕಾರಣಗಳಿಂದಾಗಿ ಹರಾಜು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೊಯಿಲ ಜಾನುವಾರು ಕೇಂದ್ರದಲ್ಲಿ ನಡೆಯಲಿದ್ದ ಜಾನುವಾರು ಏಲಂ ಪ್ರಕ್ರಿಯೆಯನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂದಳದಳ ಕಡಬ ಪ್ರಖಂಡವೂ ಜು 29 ರಂದು ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಿತ್ತು.

ಆದರೇ ಇದೀಗ ಅಧಿಕಾರಿಗಳು ಹರಾಜು ರದ್ದುಗೊಳಿಸಿರುವುದರಿಂದ ಪ್ರತಿಭಟನೆಯನ್ನೂ ಬಿಡಲಾಗಿದೆ ಎಂದು ಸಂಘಟನೆ ತಿಳಿಸಿದೆ .

ಮತ್ತೆ ಹರಾಜು ಪ್ರಕ್ರಿಯೆ ನಡೆಸಿದರೇ ಸಂಘಟನೆಯೂ ಮತ್ತೆ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ವಿಹಿಂಪ ಹಾಗೂ ಬಜರಂಗ ದಳ ಕಡಬ ಪ್ರಖಂಡ ತಿಳಿಸಿದೆ.

Leave A Reply